ADVERTISEMENT

ಮಂಗಳವಾರ, 15–7–1969

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 17:40 IST
Last Updated 14 ಜುಲೈ 2019, 17:40 IST

ಸಂಜೀವ ರೆಡ್ಡಿ ಆಯ್ಕೆಗೆ ದಲಿತ ವರ್ಗಗಳ ವಿರೋಧ

ಪುಣೆ, ಜುಲೈ 14– ‘ರಾಷ್ಟ್ರಪತಿ ಚುನಾವಣೆಗೆ ಶ್ರೀ ಸಂಜೀವ ರೆಡ್ಡಿಯವರನ್ನು ತಮ್ಮ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಕೈಗೊಂಡ ನಿರ್ಧಾರದಿಂದ ಜೇನುಗೂಡನ್ನು ಕೆದಕಿದಂತಾಗಿದೆ’ ಎಂದು ಅಖಿಲ ಭಾರತ ದಲಿತ ಸೇವಕ ಸಂಘದ ಅಧ್ಯಕ್ಷ ಶ್ರೀ ಆರ್.ಪಿ.ಎನ್. ರಾಜಭೋಜ್‌ ಅವರು ಇಂದು ಇಲ್ಲಿ ತಿಳಿಸಿದರು.

ಶ್ರೀ ವಿ.ವಿ. ಗಿರಿ,‍ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅಂಥವರೇ ಅಲ್ಲದೆ ಸಮಾಜದಲ್ಲಿನ ದಲಿತ ವರ್ಗದ ಲಕ್ಷಾಂತರ ಜನರು ಈ ನಿರ್ಧಾರದಿಂದ ಅತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಕಾರ್ಮಿಕರ ವಿವಾದಗಳ ಇತ್ಯರ್ಥ ವಿಳಂಬದ ಬಗ್ಗೆ ನಂದಾ ಆತಂಕ

ಬೆಂಗಳೂರು, ಜುಲೈ 14– ಕಾರ್ಮಿಕ ವಿವಾದಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಇಂಟಕ್ ಅಧ್ಯಕ್ಷ ಶ್ರೀ ಗುಲ್ಜಾರಿಲಾಲ್ ನಂದಾ ಅವರು ‘ವರ್ಷಗಳ ಕಾಲ ವಿವಾದ ಇತ್ಯರ್ಥಕ್ಕಾಗಿ ಕಾರ್ಮಿಕರು ಕಾದಿರಲಾಗದು’ ಎಂದಿದ್ದಾರೆ.

ವಿವಾದ ಇತ್ಯರ್ಥದಲ್ಲಿನ ವಿಳಂಬ ನಿವಾರಣೆಗೆ ಇಂಟಕ್ ಅಗ್ರ ಪ‍್ರಾಶಸ್ತ್ಯ ನೀಡುವುದೆಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.