ಹಾಸನದ ಬಳಿ ಖಾಸಗಿ ಬಸ್ ಅಪಘಾತ: 19 ಜನರ ಸಾವು
ಹಾಸನ: ನಿನ್ನೆ ರಾತ್ರಿ ಇಲ್ಲಿಗೆ 5 ಮೈಲಿ ದೂರದ ಯಗಚಿ ಹೊಳೆ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿ ಇಬ್ಬರು ಚಾಲಕರು ಮತ್ತು ಕ್ಲೀನರ್ ಸಹಿತ ಒಟ್ಟು 19 ಮಂದಿ ಸತ್ತ ಭೀಕರ ದುರಂತ ನಡೆಯಿತು.
ಬಸ್ಸಿನಲ್ಲಿದ್ದ 46 ಮಂದಿಯಲ್ಲಿ 18 ಮಂದಿ ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬರು ನಂತರ ಆಸ್ಪತ್ರೆಯಲ್ಲಿ ಸತ್ತರು. ಮೃತರಲ್ಲಿ ಇಬ್ಬರು ಹೆಂಗಸರು ಮತ್ತು ಮೂವರು ಮಕ್ಕಳು.
ಅವನತಿಯತ್ತ ಮದರಾಸು ಚಿತ್ರೋದ್ಯಮ
ಮದರಾಸು: ದೇಶದಲ್ಲಿ ಬಹಳ ಹಿಂದಿನಿಂದಲೂ ಚಿತ್ರೋದ್ಯಮಕ್ಕೆ ಹೆಸರಾಗಿದ್ದ ತಮಿಳುನಾಡಿನಲ್ಲಿ ಈಗ ಈ ಉದ್ಯಮ ಡೋಲಾಯಮಾನ ಸ್ಥಿತಿಯಲ್ಲಿದೆ.
ಚಿತ್ರ ನಿರ್ಮಾಣ ವೆಚ್ಚ ಹೆಚ್ಚಿರುವುದು, ಗಲ್ಲಾಪೆಟ್ಟಿಗೆ ತುಂಬದೆ ಇರುವುದು, ಕಾರ್ಮಿಕ ಅಶಾಂತಿ, ಇತರ ದಕ್ಷಿಣ ರಾಜ್ಯಗಳು ಚಿತ್ರೀಕರಣಕ್ಕೆ ನೀಡಿರುವ ಪ್ರೋತ್ಸಾಹ, ತಮಿಳುನಾಡಿನಲ್ಲಿ ಜಲಕ್ಷಾಮ, ವಿದ್ಯುತ್ ಕೊರತೆ ಮತ್ತು ಹಿಂದಿ ಚಿತ್ರಗಳಿಗೆ ಇರುವ ವಿಸ್ತಾರ ಮಾರುಕಟ್ಟೆ –ಈ ಪರಿಸ್ಥಿತಿಗೆ ಕಾರಣವಾಗಿರುವ ಅನೇಕ ಅಂಶಗಳೆಂದು ಉದ್ಯಮದ ಮೂಲಗಳು ಹೇಳಿವೆ. ದಕ್ಷಿಣದಲ್ಲಿ ಬೆಂಗಳೂರು ಮತ್ತು ಮೈಸೂರು ಪ್ರಮುಖ ಚಿತ್ರ ನಿರ್ಮಾಣ ಕೇಂದ್ರಗಳಾಗಿ ಕ್ರಮೇಣ ರೂಪುಗೊಳ್ಳುತ್ತಿವೆ ಎಂಬುದು ಈ ಮೂಲಗಳ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.