ADVERTISEMENT

50 ವರ್ಷಗಳ ಹಿಂದೆ: ಶನಿವಾರ, 20.2.1971

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 19:19 IST
Last Updated 19 ಫೆಬ್ರುವರಿ 2021, 19:19 IST
   

ವ್ಯಂಗ್ಯಚಿತ್ರ ಸಮರ
ಮದರಾಸು, ಫೆ. 19–
ತಮಿಳುನಾಡಿನಲ್ಲಿ ವ್ಯಂಗ್ಯಚಿತ್ರಗಳ ಭಿತ್ತಿಪತ್ರಗಳು ಚುನಾವಣಾ ಪ್ರಚಾರವನ್ನು ರಸವತ್ತಾಗಿ ಮಾಡಿವೆ.

ಮದರಾಸಿನ ಬೀದಿಗಳಲ್ಲಿ ಗೋಡೆಗಳ ಮೇಲೆ ರಾರಾಜಿಸುತ್ತಿರುವ ಈ ಚಿತ್ರಗಳು ದಾರಿಹೋಕರ ಗಮನ ಸೆಳೆಯದೆ ಬಿಡವು. ವ್ಯಂಗ್ಯಚಿತ್ರಗಳ ಮೂಲಕ ಚುನಾವಣಾ ಪ್ರಚಾರ ತಮಿಳುನಾಡಿಗೆ ಹೊಸದು.

ಸಂಸ್ಥಾ ಕಾಂಗ್ರೆಸ್ ನಾಯಕ ಕಾಮರಾಜರು ಮಹಾರಾಜರೊಬ್ಬರನ್ನು ಓಲೈಸುತ್ತಿರುವ ಚಿತ್ರವುಳ್ಳ ಡಿಎಂಕೆ ಭಿತ್ತಿಪತ್ರ ಹೀಗೆ ಹೇಳಿದೆ: ‘ರಾಷ್ಟ್ರದಲ್ಲಿ ಪ್ರತೀ 100 ಜನಕ್ಕೆ 85 ಮಂದಿ ದಿನ ಕ್ಕೊಂದು ರೂಪಾಯಿಯ ಮೇಲೆ ಜೀವನ ದೂಡುತ್ತಿದ್ದರೆ, ಬೆರಳೆಣಿಕೆಯಷ್ಟು ಮಾಜಿ ಅರಸರು ವರ್ಷಕ್ಕೆ ಐದು ಕೋಟಿ ರೂಪಾಯಿ ರಾಜಧನ ಪಡೆಯುತ್ತಿದ್ದಾರೆ. ಕಾಮರಾಜರು ಮಾಜಿ ಅರಸರು ಮತ್ತು ರಾಜಧನದ ಪರ. ನಾನು ಬಡವರ ಪರ. ನೀವು ಯಾವ ಕಡೆ?’

ADVERTISEMENT

ಸಂಸ್ಥಾ ಕಾಂಗ್ರೆಸ್ಸೂ ಹಿಂದುಳಿದಿಲ್ಲ–ಈ ವ್ಯಂಗ್ಯಚಿತ್ರಗಳ ಸಮರದಲ್ಲಿ. ಅದರಲ್ಲಿ ಬಹಳ ಜನಪ್ರಿಯವಾಗಿರುವ ವ್ಯಂಗ್ಯಚಿತ್ರ ವೆಂದರೆ ಕರುಣಾನಿಧಿಯವರು ದಿವಂಗತ ಅಣ್ಣಾದೊರೆ ಅವರ ಚಿತ್ರದ ಮುಂದೆಬೇಡುತ್ತಿರುವುದು– ‘ಪಕ್ಷವು ಮತ್ತೆ ಅಧಿಕಾರಕ್ಕೆ ಬಂದು, ಬಂಗ್ಲೆ, ಕಾರು ಮಾಡಿಕೊಳ್ಳದ ತಂಬಿಗಳು (ಸೋದರರು) ಅವನ್ನು ಮಾಡಿಕೊಳ್ಳಲಿ’ ಎಂಬುದು ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.