ADVERTISEMENT

50 ವರ್ಷಗಳ ಹಿಂದೆ: ಬುಧವಾರ, 28-4-1971

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:42 IST
Last Updated 27 ಏಪ್ರಿಲ್ 2021, 21:42 IST
   

ಢಾಕಾದಲ್ಲಿ ಭಾರತದ ಡೆಪ್ಯುಟಿ ಹೈಕಮಿಷನರ್‌ ಸೆನ್‌ ಗುಪ್ತಾ ಗೃಹಬಂಧನ
ನವದೆಹಲಿ, ಏ. 27– ಢಾಕಾದಲ್ಲಿ ಭಾರತದ ಡೆಪ್ಯುಟಿ ಹೈಕಮಿಷನರ್ ಕೆ.ಸಿ.ಸೆನ್‌ ಗುಪ್ತಾ ಸೇರಿ ಕಚೇರಿಯ ಅಧಿಕಾರಿಗಳು ಮತ್ತು ನೌಕರರನ್ನು ಪಾಕಿಸ್ತಾನಿ ಸರ್ಕಾರವು ಇಂದು ಗೃಹಬಂಧನಕ್ಕೊಳಪಡಿಸಿತೆಂದು ಅಧಿಕೃತವಾಗಿ ತಿಳಿದುಬಂದಿದೆ.

ಭಾರತದಲ್ಲಿರುವ ಪಾಕ್‌ ಅಧಿಕಾರಿಗಳಾರೂ ಸರ್ಕಾರದ ಅನುಮತಿ ಇಲ್ಲದೆ ಸ್ವದೇಶಕ್ಕೆ ತೆರಳುವುದನ್ನು ನಿಷೇಧಿಸಿರುವುದಕ್ಕೆ ಇದು ಪ್ರತೀಕಾರ ಕ್ರಮವಾಗಿರುವಂತೆ ಕಾಣಬರುತ್ತಿದೆ.

ಬೆನ್ನು ಬಿಡದ ಸಾವು
ಬೆಂಗಳೂರು, ಏ. 27– ಮಳೆಯಿಂದ ತಪ್ಪಿಸಿಕೊಳ್ಳಲು ಷೆಡ್‌ವೊಂದರಲ್ಲಿ ಆಶ್ರಯ ಪಡೆದರು. ಆದರೆ ಅಲ್ಲಿ ಅವರಿಗಾಗಿ ಸಾವು ಕಾದಿತ್ತು.

ADVERTISEMENT

ಇಂದು ಮಧ್ಯಾಹ್ನ ಗಾಳಿ ಸಮೇತದ ಮಳೆ ಬಿದ್ದಾಗ ಜಮೀನಿನಲ್ಲಿ ಕೆಲಸದಲ್ಲಿ ತೊಡಗಿದ್ದ 16 ಮಂದಿ ಓಡಿಬಂದು ಷೆಡ್‌ನಲ್ಲಿ ಆಶ್ರಯ ಪಡೆದರು. ಅವರೊಂದಿಗೆ ಎರಡು ಕುರಿ, ಒಂದು ಹಸು, ಒಂದು ನಾಯಿ ಸಹ ಓಡಿ ಬಂದವು. ಹದಿನೈದು ನಿಮಿಷದ ನಂತರ ಸಿಡಿಲು ಹೊಡೆದಾಗ, ಆಶ್ರಯ ಪಡೆದವರಲ್ಲಿ ನಾಲ್ಕು ಮಂದಿ, ಎರಡು ಕುರಿ ಸತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.