ರಾಧಾಕೃಷ್ಣನ್ ಅವರ ನಿಧನ
ಮದರಾಸ್, ಏ. 16– ಮಾಜಿ ರಾಷ್ಟ್ರಪತಿ ಡಾ. ಎಸ್.ರಾಧಾಕೃಷ್ಣನ್ ಅವರು ಇಂದು ರಾತ್ರಿ 12.45ಕ್ಕೆ ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಡಾ. ರಾಧಾಕೃಷ್ಣನ್ ಅವರು ಕಳೆದ ಎಂಟು ತಿಂಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಹತ್ತು ದಿನಗಳಿಂದ ಅವರ ಹೃದಯ ದುರ್ಬಲವಾಗಿತ್ತು.
ತಂಪು ಹಸಿರಿಗೇಕೆ ಈ ವಿಪತ್ತು?
ಹಸಿರಿನ ತಾಣವಾಗಿ ಕಬ್ಬನ್‌ಪಾರ್ಕಿನ ಬೆಳವಣಿಗೆಯನ್ನು ಮೂರು ನಾಲ್ಕು ತಲೆಮಾರಿನವರು ಕಂಡಿರಬಹುದು. ಅವರು ಅಲ್ಲಿನ ನೆರಳಿನ ಆಶ್ರಯವನ್ನು ಪಡೆದಿರಲೇಬೇಕು. ಆದರೆ ಇನ್ನೆಷ್ಟು ತಲೆಮಾರಿನವರೆಗೆ ಅದು ಮಂದುವರಿದೀತು?
ಕಟ್ಟಡ ನಿರ್ಮಾಣಕ್ಕಾಗಿ ಪಾರ್ಕಿನ ಜಮೀನನ್ನು ಕಬಳಿಸುವ ಕಾರ್ಯ ಅವ್ಯಾಹತವಾಗಿ ನಡೆದಿರುವಾಗ ಭವಿಷ್ಯದಲ್ಲಿ ಪಾರ್ಕಿನ ಗಾತ್ರ ಯಾವ ಪ್ರಮಾಣಕ್ಕೆ ಇಳಿದೀತೆಂಬ ಸಂಶಯ ಸ್ವಾಭಾವಿಕ.
ನಗರದ ಕೇಂದ್ರ ಭಾಗದಲ್ಲಿ 230 ಎಕರೆಗಳಷ್ಟು ವಿಸ್ತಾರವಾಗಿ ಚಾಚಿಕೊಂಡಿರುವ ಕಬ್ಬನ್‌ಪಾರ್ಕ್, ಕ್ರಮೇಣ ಕಟ್ಟಡಗಳ ಆಕ್ರಮಣಕ್ಕೆ ಒಳಗಾಗುತ್ತಿದೆ. ಕಬ್ಬನ್‌ಪಾರ್ಕಿನಲ್ಲಿ ಹೊಸದಾಗಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂಬ ಹಲವು ವರ್ಷಗಳಿಂದ ಜಾರಿಯಲ್ಲಿರುವ ಸರ್ಕಾರದ ತೀರ್ಮಾನಕ್ಕೆ ತಿಲಾಂಜಲಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.