ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 13 ಜೂನ್‌ 1972

ಪ್ರಜಾವಾಣಿ ವಿಶೇಷ
Published 12 ಜೂನ್ 2022, 20:00 IST
Last Updated 12 ಜೂನ್ 2022, 20:00 IST
   

ಕಲ್ಲೆಸೆತ, ಕರಪತ್ರ ದಹನ, ಸಭಾತ್ಯಾಗಗಳೊಡನೆ ಅಧಿವೇಶನ ಪ್ರಾರಂಭ

ಮುಂಬೈ, ಜೂನ್‌ 12– ನಿಲುವಳಿ ಸೂಚನೆಯೊಂದಕ್ಕೆ ಅವಕಾಶವೀಯದ ಸ್ಪೀಕರರ ತೀರ್ಪಿನ ವಿರುದ್ಧ ಪ್ರತಿಭಟನೆ ಸೂಚಿಸಲು ಇಡೀ ವಿರೋಧಪಕ್ಷದ ಸಭಾತ್ಯಾಗ, ಪ್ರೇಕ್ಷಕರ ಗ್ಯಾಲರಿಯಿಂದ ರಿಪಬ್ಲಿಕನ್‌ ಪಕ್ಷದ ಯುವಕರಿಬ್ಬರ ಕಲ್ಲೆಸತ ಹಾಗೂ ಕರಪತ್ರಗಳ ದಹನದೊಡನೆ ಮಹಾರಾಷ್ಟ್ರ ವಿಧಾನಸಭೆಯ ಎರಡು ತಿಂಗಳ ಸುದೀರ್ಘ ಮಳೆಗಾಲ ಅಧಿವೇಶನ ಇಂದು ಪ್ರಾರಂಭವಾಯಿತು.

ಹರಿಜನರು ಹಾಗೂ ನವಬೌದ್ಧರನ್ನು ಹೀನಾಯವಾಗಿ ನಡೆಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕಾಗಿ ಸರ್ಕಾರವನ್ನು ಖಂಡಿಸಲು ಸಭಾತ್ಯಾಗ ಮಾಡಲಾಯಿತು ಹಾಗೂ ಕಲ್ಲೆಸೆಯಲಾಯಿತು.

ADVERTISEMENT

ಹರಿಜನರನ್ನು ಸವರ್ಣ ಹಿಂದೂಗಳು ಬಹಿಷ್ಕರಿಸಿದ ಎರಡು ಪ್ರಕರಣಗಳು ಇತ್ತೀಚಿನ ವಾರಗಳಲ್ಲಿ ವರದಿಯಾಗಿದ್ದವು.

ಪ್ರೋತ್ಸಾಹ ಇಲ್ಲದ ಸಾಹಿತಿಗಳ ಉತ್ತಮ ಕೃತಿ ಬೆಳಕು ಕಾಣಲು ಸರ್ಕಾರದ ನೆರವ ಭರವಸೆ

ಬೆಂಗಳೂರು, ಜೂನ್‌ 12– ಅನೇಕ ಸಾಹಿತಿಳಿಗೆ ಸಾಕಷ್ಟು ಪ್ರೋತ್ಸಾಹ ಇಲ್ಲದೆ ಉತ್ತಮ ಕೃತಿಗಳು ಬೆಳಕಿಗೆ ಬರದೆ ಇರುವ ಪರಿಸ್ಥಿತಿಯನ್ನು ಸರ್ಕಾರ ಗಮನಿಸಿ ಅಂತಹ ಕೃತಿಗಳು ಹೊರಬರಲು ಸಾಧ್ಯವಾದ ಸಹಾಯ ಮಾಡಲು ಯೋಚಿಸುವುದಾಗಿ ಶಿಕ್ಷಣ ಸಚಿವ ಶ್ರೀ ಎ.ಆರ್‌. ಬದರಿನಾರಾಯಣ ಅವರು ಇಂದು ಇಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ–ಕನ್ನಡ ನಿಘಂಟುವಿನ ದ್ವಿತೀಯ ಸಂಪುಟದ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಿದ ಅವರು ಭಾಷೆಯ ಬಗ್ಗೆ ಅಭಿಮಾನ ಇರಬೇಕಾದದ್ದು ಸಹಜವಾದರೂ ಸಂಪರ್ಕ ಭಾಷೆಯನ್ನು ಕಡೆಗಣಿಸಬಾರದೆಂದು ಹೇಳಿ ಸಂಸ್ಕೃತ ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.