ADVERTISEMENT

50 ವರ್ಷಗಳ ಹಿಂದೆ: ಖೋಟಾ ಮಾರ್ಕ್ಸ್‌ಕಾರ್ಡ್‌ ಜಾಲ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಖೋಟಾ ಮಾರ್ಕ್ಸ್‌ಕಾರ್ಡ್‌ ಜಾಲ ಪತ್ತೆ

ಬೆಂಗಳೂರು, ಫೆ. 16– ಪದವಿ ಸರ್ಟಿಫಿಕೇಟ್‌ ಗಳನ್ನೂ ಒಳಗೊಂಡು ಖೋಟಾ ಮಾರ್ಕ್ಸ್‌ಕಾರ್ಡ್‌ ನಾನಾ ಪರೀಕ್ಷೆಗಳ ಸರ್ಟಿಫಿಕೇಟ್‌ಗಳು ಮೊದಲಾದವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲವೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಬಯಲಿಗೆಳೆದಿದ್ದಾರೆ.

ಗೋಡ್ಸೆಗೆ ಕ್ಷಮಾದಾನ ನೀಡಲು ಕೋರಿದ್ದ ಗಾಂಧೀಪುತ್ರರು

ADVERTISEMENT

ನವದೆಹಲಿ, ಫೆ. 16– ಅಹಿಂಸಾ ಪ್ರವರ್ತಕರಾಗಿದ್ದ ಗಾಂಧೀಜಿಯವರನ್ನು ಕೊಲೆಗೈದ ನಾಥುರಾಮ ಗೋಡ್ಸೆ ಅವರಿಗೆ ಮರಣ ದಂಡನೆ ವಿಧಿಸುವುದನ್ನು ತಪ್ಪಿಸಲು ಗಾಂಧೀಜಿಯವರ ಮಕ್ಕಳು ಶ್ರಮಿಸಿದರು. ಆದರೆ ಗವರ್ನರ್‌ ಜನರಲ್‌ ಆಗಿದ್ದ
ಸಿ. ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ಪಟೇಲ್‌ ಅವರು ಅದಕ್ಕೆ ಒಪ್ಪಲಿಲ್ಲ. 

ಸರ್ದಾರ್‌ ಪಟೇಲ್‌ ಅವರ ಪತ್ರವ್ಯವಹಾರದ ಎಂಟನೆಯ ಸಂಪುಟ ಇಂದು ಬೆಳಕು ಕಂಡಿತು. ಅದರಿಂದ ಈ ಸಂಗತಿ ವ್ಯಕ್ತವಾಗಿದೆ. 

ಗಾಂಧೀಜಿಯವರು ಸ್ವತಃ ಮರಣ ದಂಡನೆ ಶಿಕ್ಷೆಯನ್ನು ವಿರೋಧಿಸುತ್ತಿದ್ದರಾದ್ದರಿಂದ ಹಂತಕನಿಗೆ ಕ್ಷಮಾದಾನ ನೀಡಬೇಕೆಂದು ಗಾಂಧೀಜಿಯವರ ಮಕ್ಕಳಾದ ರಾಮದಾಸ್‌ ಗಾಂಧಿ ಮತ್ತು ಮಣಿಲಾಲ್‌ ಗಾಂಧಿ ಅವರು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.