ಕೆಲ ರಾಜ್ಯಗಳಲ್ಲಿ ತುಂಬು ಪ್ರವಾಹ: ಒಟ್ಟು 73 ಸಾವು
ನವದೆಹಲಿ, ಜುಲೈ 30– ರಾಷ್ಟ್ರದ ವಿವಿಧ ಕಡೆ ನದಿ ಪ್ರವಾಹದ ವಿಕೋಪಕ್ಕೆ ಮಂಗಳವಾರ ಒಟ್ಟು 73 ಜನ ಬಲಿಯಾದರು.
ಕೇರಳ, ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶದ ನದಿಗಳ ನೀರಿನ ಮಟ್ಟ ಏರುತ್ತಲೇ ಇದೆ.
ಅತ್ಯಂತ ಹೆಚ್ಚು ಜನರು ಪ್ರವಾಹಕ್ಕೆ ಬಲಿಯಾಗಿದ್ದು ಕೇರಳದಲ್ಲಿ. ಅಲ್ಲಿ ಒಟ್ಟು 37 ಜನ ಸತ್ತಿದ್ದಾರೆ. ಅಸ್ಸಾಂನಲ್ಲಿ 29 ಜನ ಹಾಗೂ ಬಿಹಾರದಲ್ಲಿ 7 ಮಂದಿ ನೀರಿಗೆ ಬಲಿಯಾದರು.
ಕೋಟೆಕಾರ್ ಬಳಿ ರೈಲು ದರೋಡೆ
ಕೋಟೆಕಾರ್, ಜುಲೈ 30– ಸುಮಾರು 90 ಮಂದಿ ಇದ್ದ ಶಸ್ತ್ರಸಜ್ಜಿತ ದರೋಡೆಕೋರರ ತಂಡವೊಂದು ಜುಲೈ 28ರ ರಾತ್ರಿ, ಇಲ್ಲಿಗೆ ಎರಡು ಮೈಲಿ ದೂರದ ಕೊಕ್ಕೊಟ್ಟು ಬಳಿ ಕಾಸರಗೋಡಿಗೆ ಹೋಗುತ್ತಿದ್ದ ರೈಲನ್ನು ತಡೆಹಿಡಿದು, ಅನೇಕ ಮಂದಿ ಪ್ರಯಾಣಿಕರ ವಸ್ತುಗಳೆಲ್ಲವನ್ನೂ ಕಸಿದುಕೊಂಡ ಘಟನೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.