ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 4.8.1972

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2022, 21:00 IST
Last Updated 3 ಆಗಸ್ಟ್ 2022, 21:00 IST
   

ದಾವಣಗೆರೆ ಕಾಟನ್‌ ಮಿಲ್ಸ್‌ನಲ್ಲಿ ಕಾರ್ಮಿಕರ ಗಲಭೆ: ಮ್ಯಾನೇಜರ್, ಕಾರ್ಮಿಕ ಸಾವು

ದಾವಣಗೆರೆ, ಆ. 3– ಹಿಂಸಾಕೃತ್ಯಗಳಲ್ಲಿ ತೊಡಗಿದ್ದ ದಾವಣಗೆರೆ ಕಾಟನ್ ಮಿಲ್ಸ್‌ನ ಭಾರಿ ಗುಂಪನ್ನು ಚದುರಿಸಲು ಇಂದು ಮಧ್ಯಾಹ್ನ ಪೊಲೀಸರು ಗುಂಡು ಹಾರಿಸಿದ ಕಾರಣ ಇಬ್ಬರು ಸಾವಿಗೀಡಾಗಿ, ಐವರು ಗಾಯಗೊಂಡರೆಂದು ವರದಿಯಾಗಿದೆ.

ಗಾಯಗೊಂಡವರಲ್ಲಿ ಚಿತ್ರದುರ್ಗ ಆಸ್ಪತ್ರೆಗೆ ಸೇರಿಸಲ್ಪಟ್ಟವರಲ್ಲಿ ಒಬ್ಬ ಕಾರ್ಮಿಕ ಸತ್ತನೆಂದು ವರದಿಗಳು ತಿಳಿಸಿವೆ. ‌

ADVERTISEMENT

ದಾವಣಗೆರೆ ಕಾಟನ್ ಮಿಲ್ಸ್‌ನ ಮ್ಯಾನೇಜರ್ ಅವರ ಕಚೇರಿಯ ಮೇಲೆ ಮಿಲ್‌ನ ಸುಮಾರು ಮೂರು ಸಹಸ್ರ ಕಾರ್ಮಿಕರ ಗುಂಪು ದಾಳಿ ನಡೆಸಿ, ಮ್ಯಾನೇಜರ್ ಶ್ರೀ ಬಿ.ಪಿ. ಶೆಟ್ಟಿ ಅವರನ್ನು ಗಾಯಗೊಳಿಸಿತೆಂದೂ, ಶೆಟ್ಟಿ ಅವರು
ಜೆ.ಜೆ.ಎಂ. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾದರೆಂದೂ ವರದಿಯಾಗಿದೆ.

ಖಾಸಿಂ ಖಾನ್ ಎಂಬ ಮಿಲ್ ಕಾರ್ಮಿಕನನ್ನು ಮ್ಯಾನೇಜರ್ ಅವರು ಸಸ್ಪೆಂಡ್ ಮಾಡಿದರೆಂದೂ, ಸಸ್ಪೆನ್‌ಷನ್ ಆಜ್ಞೆ ಹಿಂತೆಗೆದುಕೊಳ್ಳಲು ಕಾರ್ಮಿಕರ ತಂಡ ಒತ್ತಾಯಪಡಿಸಿದಾಗ ಮ್ಯಾನೇಜರ್ ಅವರು ಒಪ್ಪದ ಕಾರಣ, ಕಾರ್ಮಿಕರ ಗುಂಪು ಅವರ ಕಚೇರಿಯ ಮೇಲೆ ದಾಳಿ ನಡೆಸಿತೆಂದೂ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.