50 ವರ್ಷಗಳ ಹಿಂದೆ
ಬೆಂಗಳೂರು, ಮೇ 11– ನ್ಯಾಯವಾದ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಮೂಲಕ ಮಾನವರ ರೋಗಬಾಧೆಗಳನ್ನು ನಿವಾರಿಸಲು ಶ್ರಮಿಸಬೇಕೆಂದು ರಾಜ್ಯಪಾಲ ಮೋಹನಲಾಲ್ ಸುಖಾಡಿಯಾ ಅವರು ಇಂದು ಇಲ್ಲಿ ಔಷಧಿ ವ್ಯಾಪಾರಿಗಳಿಗೆ ಕರೆ ನೀಡಿದರು.
ಭಾರತೀಯ ಔಷಧಿ ವ್ಯಾಪಾರಿಗಳ ಜಂಟಿ ಮಂಡಳಿ ಆಶ್ರಯದಲ್ಲಿ ನಡೆದ ಔಷಧಿ ವ್ಯಾಪಾರಿಗಳ ರಾಷ್ಟ್ರೀಯ ಸಮಾವೇಶವನ್ನು ರಾಜ್ಯಪಾಲರು ಉದ್ಘಾಟಿಸಿದರು.
ವೃತ್ತಿಗೆ ಸಂಬಂಧಿಸಿದಂತೆ ಸ್ವಯಂ ನಿಯಂತ್ರಣ ನಡವಳಿಕೆ ಸಂಹಿತೆಯೊಂದನ್ನು ರೂಪಿಸಿಕೊಂಡು, ಸಾಮಾಜಿಕ ಹೊಣೆಯರಿತು ಕಾರ್ಯಮಗ್ನರಾಗಬೇಕು ಎಂದು ಅವರು ತಿಳಿಸಿದರು.
ನಕಲಿ ಔಷಧಿಗಳ ತಯಾರಿಕೆ ಮತ್ತು ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ‘ಹೀನಕೃತ್ಯ’ ಎಂದು ಕರೆದ ಸುಖಾಡಿಯಾ ಅವರು, ‘ನ್ಯಾಯಸಮ್ಮತ ಲಾಭ ತೆಗೆದುಕೊಳ್ಳಿ. ಆದರೆ ಜನತೆಯನ್ನು ಕಷ್ಟಕೋಟಲೆಗಳಿಗೆ ಸಿಲುಕಿಸಬೇಡಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.