ADVERTISEMENT

50 ವರ್ಷಗಳ ಹಿಂದೆ| ಬುಧವಾರ, 13–5–1970

​ಪ್ರಜಾವಾಣಿ ವಾರ್ತೆ
Published 12 ಮೇ 2020, 15:01 IST
Last Updated 12 ಮೇ 2020, 15:01 IST

ಕೋಮುಗಲಭೆ ಹತ್ತಿಕ್ಕಲು ಜಾತ್ಯತೀತ ಪಕ್ಷಗಳ ಸಹಕಾರಕ್ಕೆ ಚವಾಣ್‌ ಕರೆ

ನವದೆಹಲಿ, ಮೇ 12– ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದಂಥ ಕೋಮುಗಲಭೆಗಳನ್ನು ಹತ್ತಿಕ್ಕುವುದಕ್ಕಾಗಿ ಎಲ್ಲ ಪ್ರಜಾಸತ್ತಾತ್ಮಕ ಜಾತ್ಯತೀತ ಪಕ್ಷಗಳ ಸಹಕಾರವನ್ನು ಕೇಂದ್ರ ಗೃಹ ಮಂತ್ರಿ ಶ್ರೀ ವೈ.ಬಿ.ಚವಾಣ್‌ ಅವರು ಇಂದು ಕೋರಿದರು.

ಮಹಾರಾಷ್ಟ್ರದಲ್ಲಿ ಸಂಭವಿಸಿದ ಕೋಮುಗಲಭೆ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ತಾವು ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೇಳಿದ ಸದಸ್ಯರಿಗೆ ಉತ್ತರ ಕೊಡುತ್ತಿದ್ದ ಚವಾಣ್‌ ಅವರು ಮುಸ್ಲಿಂ ಕುಟುಂಬಗಳ ಮೇಲೆ ಅಮಾನುಷ ಹಲ್ಲೆ ನಡೆಯಿತೆಂಬುದು ವಾಸ್ತವಿಕ ಸಂಗತಿ ಎಂದರು.

ADVERTISEMENT

ವಾರ, ಚಿನ್ನ ಅರಿಯದ ಜನಾಂಗ‌

ಹೈದರಾಬಾದ್‌, ಮೇ 12– ಅಂಡಮಾನ್‌ ದ್ವೀಪದಲ್ಲಿ ಪುಟ್ಟದೊಂದು ಗುಂಪಿದೆ. ಈ ಗುಂಪು ‘ಓಂಗ್‌’ ಜನಾಂಗಕ್ಕೆ ಸೇರಿದ್ದು. ಈ ಜನಾಂಗದಲ್ಲಿ ಈಗಿರುವುದು ಕೇವಲ 129 ಜನ. ನಶಿಸಿಹೋಗುತ್ತಿರುವ ಜನಾಂಗವಿದು.

ಈ ಜನಾಂಗಕ್ಕೆ ಕಾಲ, ದೂರಗಳ ಅಳತೆಯ ಅರಿವಿಲ್ಲ. ಚಿನ್ನವನ್ನು ಕಂಡರಿಯದ ಜನ. ಪೌಷ್ಟಿಕಾಂಶ ರಾಷ್ಟ್ರೀಯ ಸಂಸ್ಥೆಯ ತಂಡವೊಂದು ಈ ಜನಾಂಗದ ಬಗ್ಗೆ ಸಮೀಕ್ಷೆ ನಡೆಸಿದೆ. ‘ಓಂಗ್‌’ ಜನಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಪೌಷ್ಟಿಕಾಂಶಗಳ ಕೊರತೆ ಕಾರಣವಲ್ಲವೆಂದು ಇದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.