ADVERTISEMENT

50 ವರ್ಷಗಳ ಹಿಂದೆ | 30-7-1970 ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 21:14 IST
Last Updated 30 ಜುಲೈ 2020, 21:14 IST

ಸಾಲ ಕೊಟ್ಟ ಕಂಪನಿಗಳಲ್ಲಿ ಬ್ಯಾಂಕುಗಳಿಗೆ ಮತದಾನದ ಹಕ್ಕು

ನವದೆಹಲಿ, ಜುಲೈ 30– ಐವತ್ತು ಸಾವಿರ ರೂ. ಅಥವಾ ಹೆಚ್ಚು ಹಣಕ್ಕಾಗಿ ಷೇರುಗಳನ್ನು ಒತ್ತೆ ಇಟ್ಟ ಕಂಪನಿಗಳಲ್ಲಿ, ಒತ್ತೆ ಇಟ್ಟುಕೊಂಡ ಬ್ಯಾಂಕುಗಳು ಮತ ಚಲಾಯಿಸುವ ಹಕ್ಕನ್ನು ಇನ್ನು ಮುಂದೆ ಪಡೆಯುತ್ತವೆ.

ಷೇರುಗಳನ್ನು ಪಡೆದು ಬ್ಯಾಂಕಿನಲ್ಲಿ ಒತ್ತೆ ಇಟ್ಟು, ಮತ್ತೆ ಷೇರುಗಳನ್ನು ಪಡೆದು ಸಂಸ್ಥೆಗಳ ಮೇಲೆ ಹತೋಟಿ ಪಡೆಯಲು ಪ್ರಯತ್ನಿಸುವ ಈ ಕ್ರಾಂತಿಕಾರಿ ಕ್ರಮವನ್ನು ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲು ಸಂಸ್ಥೆ

ನವದೆಹಲಿ, ಜುಲೈ 30– ಕ್ರೆಡಿಟ್‌ ಗ್ಯಾರಂಟಿ ಕಾರ್ಪೊರೇಷನ್‌ ರಚಿಸಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.

ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿನ ಸಣ್ಣ ಉದ್ದಿಮೆದಾರರಿಗೆ ಈಕಾರ್ಪೊರೇಷನ್ ಒಂದು ಲಕ್ಷ ರೂ.ವರೆಗೆ ಸಾಲ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.