ADVERTISEMENT

50 ವರ್ಷಗಳ ಹಿಂದೆ: ಸೋಮವಾರ, 24-5-1971

​ಪ್ರಜಾವಾಣಿ ವಾರ್ತೆ
Published 23 ಮೇ 2021, 18:58 IST
Last Updated 23 ಮೇ 2021, 18:58 IST
   

ಪ್ರತ್ಯೇಕತಾ ಚಟುವಟಿಕೆ, ಕೋಮು ಗಲಭೆ ಹತ್ತಿಕ್ಕಲು ಕೇಂದ್ರದ ದೃಢ ಸಂಕಲ್ಪ
ಶ್ರೀನಗರ, ಮೇ 23
– ರಾಷ್ಟ್ರದ ಯಾವುದೇ ಭಾಗದಲ್ಲಿ ಸಂಭವಿಸುವ ಕೋಮುವಾರು ಹಿಂಸಾಕೃತ್ಯಗಳನ್ನು ಮತ್ತು ಪ್ರತ್ಯೇಕತಾ ಚಟುವಟಿಕೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ದೃಢ ಸಂಕಲ್ಪ ಮಾಡಿದೆ.

ಕೇಂದ್ರ ಗೃಹಖಾತೆ ಕಾರ್ಯದರ್ಶಿ ಶ್ರೀ ಗೋವಿಂದ ನಾರಾಯಣ್‌ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಅಂಶವನ್ನು ತಿಳಿಸಿದರು.

ತುರ್ಕಿಯಲ್ಲಿ ಭೀಕರ ಭೂಕಂಪ: 2000ಕ್ಕೂ ಹೆಚ್ಚು ಜನರ ಸಾವು
ಅಂಕಾರಾ, ಮೇ 23–
ಇಸ್ತಾನ್‌ಬುಲ್‌ಗೆ ಸುಮಾರು 1,408 ಕಿಲೊ ಮೀಟರು ದೂರದಲ್ಲಿಯ ಬಿಂಗೋಲ್‌ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 2000 ಮಂದಿ ಸತ್ತಿದ್ದಾರೆಂದು ಶಂಕಿಸಲಾಗಿದೆ.

ADVERTISEMENT

ಹಿಂದಿ ಪದಗಳ ಬಳಕೆ: ಡಿ.ಎಂ.ಕೆ ನಾಯಕರಿಗೆ ಕೇಂದ್ರ ಸಚಿವರ ಆಶ್ವಾಸನೆ
ಮದ್ರಾಸ್‌, ಮೇ 23–
ಕೇಂದ್ರ ಸಚಿವರುಗಳ ಹುದ್ದೆ, ಖಾತೆಗಳ ಇಂಗ್ಲಿಷ್‌ ಪದಗಳಿಗೆ ಹಿಂದಿ ಸಮಾನಾಂತರ ಶಬ್ದಗಳನ್ನು ತಿಳಿಸುವ ಸುತ್ತೋಲೆಯಿಂದ ಹಿಂದಿಯೇತರ ಜನರ ಮನಸ್ಸಿನಲ್ಲಿ ಮೂಡಿರುವ ತಪ್ಪು ಅಭಿಪ್ರಾಯವನ್ನು ಕೂಡಲೇ ನಿವಾರಿಸಲಾಗುವುದು ಎಂದು ಕೇಂದ್ರದ ಪಾರ್ಲಿಮೆಂಟರಿ ವ್ಯವಹಾರಗಳ ಸಚಿವ ರಾಜಬಹದ್ದೂರ್‌ ಅವರು ತಮಗೆ ಆಶ್ವಾಸನೆ ನೀಡಿದ್ದಾರೆಂದು ಡಿ.ಎಂ.ಕೆ ಸಂಸತ್‌ ಗುಂಪಿನ ನಾಯಕ ಕೆ. ಮನೋಹರನ್‌ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.