ಖಾಸಗಿ ವೈದ್ಯಕೀಯ ಕಾಲೇಜು ವಹಿಸಿಕೊಳ್ಳುವ ಪ್ರಶ್ನೆ: ಸರ್ಕಾರದ ಪರಿಶೀಲನೆಯಲ್ಲಿ
ಬೆಂಗಳೂರು, ಅ. 19– ರಾಜ್ಯದಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಸರ್ಕಾರವೇ ವಹಿಸಿಕೊಳ್ಳುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಆರೋಗ್ಯ ಸಚಿವ ಶ್ರೀ ವೈ. ರಾಮಕೃಷ್ಣ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
‘ಒಬ್ಬ ಎಂ.ಬಿ.ಬಿ.ಎಸ್ ಪದವೀಧರನನ್ನು ಸಿದ್ಧ ಮಾಡಲು ಸಾವಿರಾರು ರೂಪಾಯಿ ವೆಚ್ಚವಾಗಲಿದೆ. ಅಲ್ಲದೆ ಕಾಲೇಜುಗಳನ್ನು ವಹಿಸಿಕೊಳ್ಳುವುದಕ್ಕೆ ಅಪಾರ ಹಣ ಬೇಕಾಗುತ್ತದೆ. ಹಣಕಾಸಿನ ಬಿಕ್ಕಟ್ಟಿನ ಪರಿಸ್ಥಿತಿ ಇರುವ ಈಗಿನ ಸಂದರ್ಭದಲ್ಲಿ ಅದು ಸೂಕ್ತವೇ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಿತ್ತರು.
ವಾಯುಪಡೆಗೆ ಪ್ರಥಮ ಸ್ವದೇಶಿ ಮಿಗ್ ವಿಮಾನ
ನಾಸಿಕ್ (ಮಹಾರಾಷ್ಟ್ರ), ಅ. 19– ಭಾರತೀಯ ನಿರ್ಮಿತ ಪ್ರಥಮ ಮಿಗ್ ವಿಮಾನವನ್ನು ವಿಮಾನ ಪಡೆ ದಳಪತಿ ಏರ್‌ಚೀಫ್ ಮಾರ್ಷಲ್ ಪಿ.ಸಿ. ಲಾಲ್ ಅವರಿಗೆ ರಕ್ಷಣೆ ಉತ್ಪಾದನಾ ಸಚಿವ ಪಿ.ಸಿ. ಸೇಥಿ ಅವರು ಇಂದು ಅರ್ಪಿಸಿದರು.
ಹಿಂದೂಸ್ಥಾನ್ ಏರೊನಾಟಿಕ್ಸ್ ಸಂಸ್ಥೆಯ ಓಚಾರ್ ನಾಸಿಕ್‌ನಲ್ಲಿರುವ ಮಿಗ್ ಕಾರ್ಖಾನೆಯಲ್ಲಿ ರಷ್ಯಾ ನೆರವಿನಿಂದ ಈ ವಿಮಾನ ನಿರ್ಮಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.