ADVERTISEMENT

ಗುರುವಾರ, 10–4–1969

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:00 IST
Last Updated 9 ಏಪ್ರಿಲ್ 2019, 20:00 IST

ತೆಲಂಗಾಣ ರಚನೆಗೆ ಬಹುತೇಕ ವಿರೋಧ: ವಿರೋಧ ಪಕ್ಷಗಳ ನಾಯಕರ ಜತೆ ಪ್ರಧಾನಿ ಇಂದಿರಾ ಗಾಂಧಿ ಚರ್ಚೆ
ನವದೆಹಲಿ, ಏ.9– ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಆಂಧ್ರಪ್ರದೇಶವನ್ನು ವಿಭಜಿಸುವುದನ್ನು ಸ್ವತಂತ್ರ ಪಕ್ಷವನ್ನು ಬಿಟ್ಟು, ಉಳಿದೆಲ್ಲ ವಿರೋಧ ಪಕ್ಷಗಳ ನಾಯಕರು ಇಂದು ತೀವ್ರವಾಗಿ ವಿರೋಧಿಸಿದರು.

ಆದರೆ ತೆಲಂಗಾಣ ಜನತೆಗೆ ಈಗಾಗಲೇ ನೀಡಲಾಗಿರುವ ವಿಶೇಷ ರಕ್ಷಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೂಡಲೆ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಅವರು ಪ್ರಧಾನಮಂತ್ರಿಗಳ ಜೊತೆ ನೂರು ನಿಮಿಷಗಳ ಕಾಲ ನಡೆಸಿದ ಮಾತುಕತೆಯಲ್ಲಿ ಒತ್ತಾಯಪಡಿಸಿದರು.

ನೀರಾವರಿ ಆಯೋಗದ ರಚನೆ
ನವದೆಹಲಿ, ಏ. 9– ಪಾರ್ಲಿಮೆಂಟ್ ಸದಸ್ಯ ಎ.ಪಿ. ಜೈನ್ ಅವರು ಅಧ್ಯಕ್ಷರಾಗಿರುವ ನೀರಾವರಿ ಆಯೋಗವನ್ನು ಕೇಂದ್ರ ಸರ್ಕಾರ ಇಂದು ರಚಿಸಿತು.

ADVERTISEMENT

‘ಆರು ಮಂದಿ ಸದಸ್ಯರಿರುವ ಈ ಆಯೋಗವು ಎರಡು ವರ್ಷಗಳೊಳಗಾಗಿ ವರದಿ ಸಲ್ಲಿಸಬೇಕು’. ನಿರ್ದಿಷ್ಟ ಸಮಸ್ಯೆಗಳ ಬಗೆಗೆ ಅದು ತಾತ್ಕಾಲಿಕ ಶಿಫಾರಸುಗಳನ್ನು ಮಾಡಬಹುದು.

ಕಾಸಿಪುರ ಬಂದೂಕ ಕಾರ್ಖಾನೆ ಪ್ರಸಂಗ: ನ್ಯಾಯಾಧೀಶರಿಂದ ತನಿಖೆ ನಡೆಸಲು ಕೇಂದ್ರದ ನಿರ್ಧಾರ
ನವದೆಹಲಿ, ಏ. 9– ಕಾಸಿಪುರ ಬಂದೂಕ ಮತ್ತು ಷೆಲ್ ತಯಾರಿಕೆ ಕಾ‌ರ್ಖಾನೆಯ ಕಾರ್ಮಿಕರ ಮೇಲೆ ರಕ್ಷಣಾದಳದ ಕಾವಲುಗಾರರು ಗುಂಡು ಹಾರಿಸಿದ ಪ್ರಕರಣದ ಬಗೆಗೆ ಹೈಕೋರ್ಟ್ ಇಲ್ಲವೆ ಅದಕ್ಕೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಾಗುತ್ತದೆ.

ಉದ್ರಿಕ್ತಗೊಂಡಿದ್ದ ಲೋಕಸಭೆಯಲ್ಲಿ ರಕ್ಷಣಾ ಸಚಿವ ಸ್ವರಣ್‌ಸಿಂಗ್ ಇಂದು ಈ ಭರವಸೆಯನ್ನಿತ್ತರು.

ಕಾಸಿಪುರದ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದೆಂದು ಸಚಿವರು ಭರವಸೆಯಿತ್ತರೂ, ದುರ್ಗಾಪುರ ಉಕ್ಕಿನ ಕಾರ್ಖಾನೆ ನೌಕರರ ಮೇಲೆ ಗೋಲಿಬಾರು ನಡೆಸಿದ ನಂತರ ಈ ಘಟನೆ ನಡೆದಿರುವುದರ ಬಗ್ಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.