ADVERTISEMENT

ಸಶಸ್ತ್ರ ದಂಗೆ ವಿರುದ್ಧ ಉಗ್ರಗಾಮಿಗಳಿಗೆ ಚವಾಣ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 20:01 IST
Last Updated 11 ಡಿಸೆಂಬರ್ 2018, 20:01 IST

ಸಶಸ್ತ್ರ ದಂಗೆ ವಿರುದ್ಧ ಉಗ್ರಗಾಮಿಗಳಿಗೆ ಚವಾಣ್ ಎಚ್ಚರಿಕೆ

ನವದೆಹಲಿ, ಡಿ. 11– ಜನತಾ ಚಳವಳಿಯ ಹೆಸರಿನಲ್ಲಿ ಸಶಸ್ತ್ರ ಕ್ರಾಂತಿಗೆ ಯತ್ನಿಸಿದರೆ ಜನತಾ ಚಳವಳಿಗಾರರನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲಾಗುವುದು ಎಂದು ಗೃಹ ಸಚಿವ ಚವಾಣ್ ಇಂದು ಉಗ್ರವಾಗಿ ಎಚ್ಚರಿಸಿದರು.

ಮಹಾಜನ್ ವರದಿ ಫೈಲು ನಾಪತ್ತೆ

ADVERTISEMENT

ನವದೆಹಲಿ, ಡಿ. 11– ಮೈಸೂರು–ಮಹಾರಾಷ್ಟ್ರ–ಕೇರಳ ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗದ ವರದಿಗೆ ಸಂಬಂಧಿಸಿರುವ ಬಹುಮುಖ್ಯ ಫೈಲೊಂದು ನಾಪತ್ತೆಯಾಗಿದೆ ಎಂದು ವರದಿ.

ಈ ಫೈಲು ಏನಾಯಿತು? ಎಲ್ಲಿ ಹೋಯಿತು? ಎಂಬುದನ್ನು ಕಂಡು ಹಿಡಿಯಲು ಯತ್ನಗಳನ್ನು ನಡೆಸಲಾಗುತ್ತಿದೆ.

ಯಾವುದೋ ಇಲಾಖೆಗೆ ತಪ್ಪಿ ಹೋಗಿರಬಹುದು ಎಂದು ಅಭಿಪ್ರಾಯಪ‍ಡಲಾಗಿದೆ.

ಫೈಲು ಹುಡುಕುವುದರಲ್ಲಿ ಕೇಂದ್ರ ಗೃಹಸಚಿವ ಖಾತೆ ಬಹುಶಃ ಸಾಕಷ್ಟು ಶ್ರಮ ವಹಿಸಿದೆ ಎಂದು ಪೇಟ್ರಿಯಾಟ್‌ ಪತ್ರಿಕೆ ಡಿ. 11ರ ಸಂಚಿಕೆಯಲ್ಲಿ ಪ್ರಕಟಿಸಿದೆ.

ಆಂಧ್ರದಲ್ಲಿ ನಕ್ಸಲೀಯರ ಚಟುವಟಿಕೆ

ಖಮ್ಮಮ್, ಡಿ. 11– ಭದ್ರಾಚಲದ ವೆಂಕಟಪುರಂ ಮತ್ತು ಪೇರೂರು ಪ್ರದೇಶ ಮತ್ತು ಯಲ್ಲಂಡು ತಾಲ್ಲೂಕಿಗೆ ಸೇರಿದ ಗುಂಡಾಲ ಅರಣ್ಯ ಪ್ರದೇಶದಲ್ಲಿ ನಲಗೊಂಡ, ಕರೀಂನಗರ, ಪಶ್ಚಿಮ ಗೋದಾವರಿ ಮತ್ತು ಖಮ್ಮಮ್ ಜಿಲ್ಲೆಗಳಿಗೆ ಸೇರಿದ ‘ನಕ್ಸಲೀಯರು’ ಗುಡ್ಡಗಾಡು ಜನಾಂಗಗಳಿಗೆ ಗೆರಿಲ್ಲಾ ಸಮರ ತಂತ್ರದಲ್ಲಿ ತರಬೇತಿ ಕೊಡುತ್ತಿರುವರೆಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.