75 ವರ್ಷಗಳ ಹಿಂದೆ
ನ್ಯೂಯಾರ್ಕ್ ಜುಲೈ 5– ಭಾರತವು ಕೊರಿಯಾ ಯುದ್ಧದ ಬಗ್ಗೆ ಮಧ್ಯಸ್ಥಿಕೆ ವಹಿಸಲಿದೆ ಇಲ್ಲವೇ ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿದೆ ಎಂಬ ವರದಿಯ ಬಗ್ಗೆ ಬರೆಯಲಾಗಿರುವ ಅಗಣಿತ ಪ್ರಶ್ನೆಗಳಿಗೆ ವಿಶ್ವಸಂಸ್ಥೆಯ ಭಾರತ ನಿಯೋಗ ಕಳೆದ ಎರಡು ದಿನಗಳಿಂದ ಉತ್ತರ ಕೊಡುತ್ತಿದೆ ಎಂದು ಪಿಟಿಐ ವಿಶೇಷ ಪ್ರತಿನಿಧಿ ಶ್ರೀ ಡಿ.ಪಿ ವಾಗಳೆ ಅವರು ತಿಳಿಸಿದ್ದಾರೆ.
ಭದ್ರತಾ ಸಮಿತಿ ನಿರ್ಣಯಕ್ಕೆ ತಮ್ಮ ಸಂಪೂರ್ಣ ಒಪ್ಪಿಗೆ ಕೊಡುತ್ತಾ, ಭಾರತ ಈ ಪರಿಸ್ಥಿತಿಯಲ್ಲಿ ಕೂಡ ಮಧ್ಯಸ್ಥಿಕೆಯ ಮೂಲಕ ಒಪ್ಪಂದವಾಗುವ ಆಸೆಯನ್ನು ತೊಡೆದು ಹಾಕಬೇಕಾಗಿಲ್ಲ ಎಂಬ ಆಶಾಭಾವ ತೋರಿಸಿದುದೇ ಈ ಊಹೆಗೆ ಕಾರಣವಿದ್ದ ಹಾಗೆ ತೋರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.