75 ವರ್ಷಗಳ ಹಿಂದೆ ಈ ದಿನ
ಸೆ. 1ರಿಂದ ಪೆಟ್ರೋಲ್ ರೇಷನಿಂಗ್ ರದ್ದು
ಬೆಂಗಳೂರು, ಆಗಸ್ಟ್ 25– ಬರುವ ಸೆಪ್ಟೆಂಬರ್ 1ರಿಂದ ಮೈಸೂರು ಸಂಸ್ಥಾನಾದ್ಯಂತ ಪೆಟ್ರೋಲ್ ರೇಷನಿಂಗ್ ರದ್ದಾಗುವುದು.
ಇದರ ಜೊತೆಗೆ ಮದ್ರಾಸ್ ಪ್ರಾಂತ, ಹೈದರಾಬಾದ್, ತಿರುವಾಂಕೂರು–ಕೊಚ್ಚಿ ಒಕ್ಕೂಟ, ಈ ದಕ್ಷಿಣ ಭಾರತ ಭಾಗಗಳು ಮತ್ತು ದೆಹಲಿ, ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ತಾನ ಮತ್ತು ಸೌರಾಷ್ಟ್ರ ಈ ಪ್ರದೇಶಗಳಲ್ಲೂ ಪೆಟ್ರೋಲನ್ನು ಡಿ–ರೇಷನ್ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಕಾಶ್ಮೀರ ಜನಮತ ಪ್ರದರ್ಶನದ ಮಾರ್ಗಕ್ಕೆ ವಿಶ್ವಸಂಸ್ಥೆಯ ಬೆಂಬಲ
ನ್ಯೂಯಾರ್ಕ್, ಆಗಸ್ಟ್ 25– ಕಾಶ್ಮೀರದ ಜನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅವಕಾಶವಾಗುವ ಮಾರ್ಗವನ್ನು ವಿಶ್ವಸಂಸ್ಥೆಯು ಅನುಸರಿಸಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಇಂದು ಕಾಶ್ಮೀರ ಬಿಕ್ಕಟ್ಟಿನ ಬಗ್ಗೆ ಅಗ್ರಲೇಖನ ಬರೆದಿದೆ. ಈ ಸಮಸ್ಯೆಯ ಶೀಘ್ರ ಪರಿಹಾರವು ಅನೇಕ ಕಾರಣಗಳಿಂದ ಮುಖ್ಯ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.