ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 1–9–1970

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 15:15 IST
Last Updated 31 ಆಗಸ್ಟ್ 2020, 15:15 IST
   

ಚೀನಿ ಅಣ್ವಸ್ತ್ರಶಕ್ತಿ: ಅಂದಾಜಿಗಿಂತ ಪ್ರಬಲ

ವಾಷಿಂಗ್ಟನ್‌, ಆ. 31– ಅಕ್ಟೋಬರ್‌ ತಿಂಗಳಲ್ಲಿ ಕೆಂಪುಚೀನಾ ಹಾರಿಸಲು ಉದ್ದೇಶಿಸಿರುವ ಕ್ಷಿಪಣಿಯು ಇಡಿ ಪ್ರಪಂಚದ ಗಮನ ಸೆಳೆಯುವಂತಹುದು.

ಅಣುಶಕ್ತಿ ಭೌತಶಾಸ್ತ್ರಜ್ಞ ಡಾ. ರಾಲ್ಫ್‌ಲ್ಯಾಪ್‌ ಅವರ ಖಚಿತ ಅಭಿಪ್ರಾಯವಿದು.

ADVERTISEMENT

ಅಣ್ವಸ್ತ್ರಗಳ ಬಗ್ಗೆ ಮೂವತ್ತು ವರ್ಷಗಳ ಕಾಲ ಅಧ್ಯಯನ ನಡೆಸಿರುವ ಲ್ಯಾಪ್‌ ‘ಖಂಡಾಂತರ ಕ್ಷಿಪಣಿ ಯಶಸ್ವಿಯಾಗಿ ಹಾರಿ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತದೆ. ವಾಷಿಂಗ್ಟನ್ನಿಗೆ ಇದೊಂದು ಪಟ್ಟಾಗಿ ಪರಿಣಮಿಸುತ್ತದೆ. ಪೌರ್ವಾತ್ಯ ದೇಶದಿಂದ ಇರಬಹುದಾದ ಅಣ್ವಸ್ತ್ರ ಭೀತಿಯ ಬಗ್ಗೆ ಅಂದಾಜನ್ನು ಅಮರಿಕದ ರಕ್ಷಣಾ ಇಲಾಖೆ ಬದಲಿಸುವಂತೆ ಇದು ಮಾಡಬಹುದು’ ಎಂದಿದ್ದಾರೆ.

ಕಲೆ ಸಾಹಿತ್ಯ ಕ್ಷೇತ್ರದ 7 ಮಂದಿ ಹಿರಿಯರಿಗೆ ವಿಶ್ರಾಂತಿ ವೇತನ

ಬೆಂಗಳೂರು, ಆ. 31– ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸೇವೆ ಸಲ್ಲಿಸಿರುವ ಏಳು ಮಂದಿ ಹಿರಿಯರಿಗೆ ಜೀವನಪರ್ಯಂತ ವಿಶ್ರಾಂತಿ ವೇತನ ನೀಡಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.

ವಿಶ್ರಾಂತಿ ವೇತನದ ಮೊಬಲಗು, ಪ್ರತಿ ತಿಂಗಳು 250 ರೂಪಾಯಿ. ಮಂತ್ರಿಮಂಡಲದ ಈ ನಿರ್ಧಾರವನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ವರದಿಗಾರರಿಗೆ ತಿಳಿಸಿದರು.

ವಿಶ್ರಾಂತಿ ವೇತನ ಪಡೆಯುವ ಹಿರಿಯರಿವರು: ಶ್ರೀ ಶಿವರಾಮ ಕಾರಂತ, ಪು.ತಿ ನರಸಿಂಹಾಚಾರ್‌, ಶಂ.ಬಾ. ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಚಂದ್ರಶೇಖರ ಶಾಸ್ತ್ರಿ, ಕೃಷ್ಣರಾವ್‌ ಕಪಟರಾಳ್‌ ಮತ್ತು ಶಂಕರರಾವ್‌ ಆಳಂದ್ಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.