
ಕನ್ನಡ ನೆಲ ಮುಟ್ಟಿ ನಮಿಸಿದ ಡಾ. ರಾಜ್ ಕುಮಾರ್
ಬೆಂಗಳೂರು, ನ. 16– ದಟ್ಟ ಕಾನನದಲ್ಲಿ ಮೂರುವರೆ ತಿಂಗಳುಗಳ ಕಾಲ ‘ವನವಾಸ’ ಮುಗಿಸಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಕನ್ನಡದ ಮೇರುನಟ, ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರಿಗೆ ಸಾವಿರಾರು ಅಭಿಮಾನಿಗಳು ಮತ್ತು ಬಂಧುಗಳು ಆತ್ಮೀಯ ಸ್ವಾಗತ ನೀಡಿದರು.
ಅದೇ ರೀತಿ ತಮ್ಮ ಅಭಿಮಾನಿ ‘ದೇವರುಗಳನ್ನು’ ಕಂಡ ರಾಜ್, ತುಂಬು ಹೃದಯದಿಂದ ಎಲ್ಲವನ್ನೂ ಸ್ವೀಕರಿಸಿ ಭಾವಪರವಶರಾದರು.
ಸಾಕ್ಷರತೆಗಾಗಿ ‘ಸರ್ವ ಶಿಕ್ಷಾ ಅಭಿಯಾನ’
ನವದೆಹಲಿ, ನ. 16 (ಪಿಟಿಐ)– ದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ‘ಸರ್ವ ಶಿಕ್ಷಾ ಅಭಿಯಾನ’ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿತು.
2010ರ ವೇಳೆಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಗುರಿಯನ್ನು ಸಾಧಿಸುವ ಸಮಗ್ರ ಕಾರ್ಯಕ್ರಮವಾಗಿರುವ ಈ ಯೋಜನೆಯ ಪ್ರಕಾರ 6ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ 2003ರ ವೇಳೆಗೆ ಶಿಕ್ಷಣ ದೊರೆಯುವಂತೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್, ಸಂಪುಟ ಸಭೆಯ ನಂತರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.