ADVERTISEMENT

50 ವರ್ಷಗಳ ಹಿಂದೆ: ಕೇಂದ್ರದ ಅನಿಶ್ಚಯ, ನಿಧಾನ ಧೋರಣೆಗೆ ಸಚಿವ ಕೃಷ್ಣ ವಿಷಾದ

50 ವರ್ಷ (5-2-1974) (ಮಂಗಳವಾರ)

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 20:23 IST
Last Updated 4 ಫೆಬ್ರುವರಿ 2024, 20:23 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ವಿಜಯನಗರ ಉಕ್ಕು ಕಾರ್ಖಾನೆ: ಕೇಂದ್ರದ ಅನಿಶ್ಚಿಯ, ನಿಧಾನ ಧೋರಣೆಗೆ ಸಚಿವ ಕೃಷ್ಣ ವಿಷಾದ

ಬೆಂಗಳೂರು, ಫೆ. 4– ನಾಲ್ಕು ವರ್ಷಗಳ ಹಿಂದೆ ಅಬ್ಬರದಿಂದ ಅನುಮತಿ ದೊರಕಿಸಿಕೊಂಡ ವಿಜಯನಗರ ಉಕ್ಕಿನ ಕಾರ್ಖಾನೆಯ ‘ತೀರಾ ನಿಧಾನ ಹಾಗೂ ವೇದನಾಪೂರ್ಣ ಪ್ರಗತಿ’ಗೆ ಕಾರಣವಾದ ಕೇಂದ್ರ ಉಕ್ಕು ಇಲಾಖೆಯ ಧೋರಣೆಯ ಬಗ್ಗೆ ರಾಜ್ಯ ಕೈಗಾರಿಕಾ ಮಂತ್ರಿಯವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. 

‘ಈ ಅವಧಿಯಲ್ಲಿ ನಿರ್ಮಾಣ ವೆಚ್ಚ ದ್ವಿಗುಣಗೊಂಡಿದೆ; ತೈಲ ಬಿಕ್ಕಟ್ಟಿನಂಥ ಸಮಸ್ಯೆಗಳು ಉದ್ಭವಿಸಿವೆ. ನಿಧಾನ ಧೋರಣೆಯಿಂದಾಗಿ ಹೀಗೆ ಕಳೆದುಹೋದ ಅಮೂಲ್ಯ ಸಮಯದ ಬಗ್ಗೆ ಯೋಚಿಸುವಾಗ ತೀರಾ ನೋವು ಆಗುತ್ತದೆ’ ಎಂದು ಸಚಿವ ಎಸ್.ಎಂ. ಕೃಷ್ಣ ಅವರು ಹೇಳಿದರು. 

ADVERTISEMENT

ಖ್ಯಾತ ಅಣು ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ನಿಧನ

ಕೋಲ್ಕತ್ತ, ಫೆ. 4– ವಿಶ್ವವಿಖ್ಯಾತ ವಿಜ್ಞಾನಿಗಳಾದ ರಾಷ್ಟ್ರೀಯ ಪ್ರೊಫೆಸರ್ ಸತ್ಯೇಂದ್ರನಾಥ್ ಬೋಸ್ ಅವರು ಇಂದು ಬೆಳಿಗ್ಗೆ ಇಲ್ಲಿ ನಿಧನ ಹೊಂದಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. 

ಖ್ಯಾತ ಭೌತ ವಿಜ್ಞಾನಿಗಳಾದ ಸತ್ಯಬೋಸ್ ಅವರು, ‘ಕ್ವಾಂಟಮ್ ಸ್ಟ್ಯಾಟಿಕ್ಸ್’ ಸಿದ್ಧಾಂತದ ಕರ್ತವ್ಯಗಳು, ಸಿದ್ಧಾಂತದ ಸುವರ್ಣ ಮಹೋತ್ಸವದ ಅಂಗವಾಗಿ ಜನವರಿ 10ರಂದು ನಡೆದ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ ಬೋಸ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.