ADVERTISEMENT

ಗುರುವಾರ, 3–10–1968

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 20:00 IST
Last Updated 2 ಅಕ್ಟೋಬರ್ 2018, 20:00 IST
   

ಗ್ರಾಮ–ಶ್ರಮದಾನಗಳ ಪುನಶ್ಚೇತನ: ನಗರದಲ್ಲಿ ಬಾಪೂಜಿ ಸ್ಮರಣೆ‌

ಬೆಂಗಳೂರು, ಅ. 2– ಭಾರತದ ದಾಸ್ಯದ ವಿರುದ್ಧ ಜನತೆಯನ್ನು ಅಹಿಂಸಾ ಮಾರ್ಗದಲ್ಲಿ ನಡೆಸಿದ ವಿಮೋಚನ ಸಮರದ ಪ್ರವರ್ತಕ ಹಾಗೂ ನಾಯಕ, ವಿಶ್ವ ವಂದ್ಯ ಬಾಪೂಜಿಯ ಶತಮಾನೋತ್ಸವ ಸಮಾರಂಭ ನಗರದಲ್ಲಿ ಮಂಗಳವಾದ್ಯ ಹಾಗೂ ಜಯಘೋಷಗಳೊಂದಿಗೆ ಆರಂಭವಾಯಿತು.

ಇನ್ನು ಒಂದು ವರ್ಷ ಕಾಲ ನಡೆಯುವ ಗಾಂಧೀ ಶತಮಾನೋತ್ಸವದ ಅಂಗವಾಗಿ ಗಾಂಧೀಜಿ ಬೋಧಿಸಿ, ಜೀವಿಸಿ ಮಾರ್ಗದರ್ಶನ ಮಾಡಿದ ಆದರ್ಶಗಳಿಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಅಥವಾ ನಡೆಸಲಾಯಿತು.

ADVERTISEMENT

ಎಂ.ಪಿ.ಗಳ ವೇತನಕ್ಕೆ ಆದಾಯ ತೆರಿಗೆ ಇಲ್ಲ

ನವದೆಹಲಿ, ಅ. 2– ಆದಾಯ ತೆರಿಗೆ ಖೋತಾವಿಲ್ಲದೆ ತಮ್ಮ ಪೂರ್ಣ ವೇತನವನ್ನು ಎಲ್ಲ ಸಂಸತ್ ಸದಸ್ಯರು ಇನ್ನು ಮುಂದೆ ಪಡೆಯುವರು.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅವರು ಆದಾಯ ತೆರಿಗೆಯಾಗಿ ತೆತ್ತಿರುವ ಹಣವನ್ನೂ ಅವರಿಗೆ ವಾಪಸ್ ಕೊಡಿಸಲಾಗುವುದು.

ಮಾಜಿ ಅರಸರ ಹೋರಾಟದ ಮುಂದಿನ ಘಟ್ಟ: ಕಾಂಗ್ರೆಸ್ಸಿಗೆ ಸಾಮೂಹಿಕ ರಾಜಿನಾಮೆ?

ನವದೆಹಲಿ, ಆ. 2– ಮಾಜಿ ಅರಸರ ರಾಜಧನ ಮತ್ತು ಹಕ್ಕು ಬಾಧ್ಯತೆಯನ್ನು ರದ್ದುಪಡಿಸಲು ಮುಂದಿನ ಸಂಸತ್ ಅಧಿವೇಶನದಲ್ಲಿ ಸೂಕ್ತ ಶಾಸನ ತರಲು ಕೇಂದ್ರ ಸರ್ಕಾರ ಈಗ ನಿರ್ಧಾರ ಕೈಗೊಂಡು ಮಾಜಿ ಅರಸರು ಮತ್ತು ಕೇಂದ್ರದ ನಡುವೆ ಪ್ರಾರಂಭವಾಗಿರುವ ಘರ್ಷಣೆ ಮುಂದಿನ ಘಟ್ಟಕ್ಕೆ ಸರಿದಿದೆ.

ಚಿಲಿಯಲ್ಲಿ ಇಂದಿರಾ

ಸಾಂಟಿಯಾಗೊ, ಅ.2– ಚಿಲಿಯಲ್ಲಿ ಮೂರು ದಿನಗಳ ಪ್ರವಾಸಕ್ಕಾಗಿ ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿಗೆ ಆಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.