ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ, 19–07–1972

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 15:23 IST
Last Updated 18 ಜುಲೈ 2022, 15:23 IST
   

ಜಯಚಾಮರಾಜ ಒಡೆಯರ ಖಾಸಗಿ ಸ್ವತ್ತು: ಕೇಂದ್ರ ಸರ್ಕಾರದ ಸ್ಪಷ್ಟನೆ

ಬೆಂಗಳೂರು, ಜುಲೈ 18 – 1950ರ ಪ್ರಭುತ್ವ ವರ್ಗಾವಣೆ ಸಮಯದಲ್ಲಿ ತಯಾರಾದ ಆಸ್ತಿ ಪಟ್ಟಿಯ ಪ್ರಕಾರ, ಮೈಸೂರು, ಬೆಂಗಳೂರು ಮತ್ತು ಉದಕ ಮಂಡಲಗಳಲ್ಲಿರುವ ಅರಮನೆಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತೆಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ಈ ಮೂರೂ ಅರಮನೆಗಳಿರುವುದು ಮಹಾರಾಜರ ಉಪಯೋಗಕ್ಕೆ ಮಾತ್ರ, ಮಾರಾಟಕ್ಕೆ ಅವರಿಗೆ ಹಕ್ಕಿಲ್ಲ ಎಂಬ ಇದುವರೆಗಿನ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯಕ್ಕೆ ಕೇಂಂದ್ರದ ಗೃಹ ಶಾಖೆ ಪತ್ರ ಬರೆದು ತಿಳಿಸಿದೆ.

ADVERTISEMENT

ಶ್ರೀ ಹಾವನೂರ್‌ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆ

ಬೆಂಗಳೂರು, ಜುಲೈ 18– ರಾಜ್ಯ ಸರ್ಕಾರ ಶ್ರೀ ಎಲ್.ಜಿ.ಹಾವನೂರ್‌ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದೆ.

ಹಿಂದುಳಿದ ವರ್ಗಗಳ ದೀರ್ಘ ಕಾಲದ ಬೇಡಿಕೆಯಾದ ಈ ಆಯೋಗ ರಚನೆಯನ್ನು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು, ಸರ್ವ ಶ್ರೀ ವೈ.ರಾಮಚಂದ್ರ, ಕೆ.ಆರ್‌.ಎಸ್‌. ನಾಯ್ಡು, ಕೆ.ಎಂ.ನಾಗಣ್ಣ, ಧರ್ಮಸಿಂಗ್‌ (ಎಲ್ಲರೂ ಶಾಸಕರು) ಎಸ್‌.ಆರ್‌.ಮಸಣಶೆಟ್ಟಿ ಮತ್ತು ಪಿ.ಟಿ.ಹಬೀಬ್‌ ಅವರು ಆಯೋಗದ ಇತರ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.