ADVERTISEMENT

ಭಾನುವಾರ, 23–11–1969

ಭಾನುವಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 17:25 IST
Last Updated 22 ನವೆಂಬರ್ 2019, 17:25 IST

ಕಾಂಗ್ರೆಸ್‌ ಅಧ್ಯಕ್ಷತೆಯಿಂದ ಎಸ್ಸೆನ್ ‘ವಜಾ’; ಸುಬ್ರಹ್ಮಣ್ಯಂ ಆಯ್ಕೆ

ನವದೆಹಲಿ, ನ. 22– ಪ್ರಧಾನಿ ಇಂದಿರಾ ಗಾಂಧಿ ಬೆಂಬಲಿಗರು ಕರೆದ ಕೋರಿಕೆ ಎ.ಐ.ಸಿ.ಸಿ. ಅಧಿವೇಶನವು ಇಂದು ಶ್ರೀ ಎಸ್. ನಿಜಲಿಂಗಪ್ಪನವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ತಮಿಳುನಾಡು ಕಾಂಗ್ರೆಸ್ ನಾಯಕ ಶ್ರೀ ಸಿ. ಸುಬ್ರಹ್ಮಣ್ಯಂ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು.

ಡಿಸೆಂಬರ್ ಕೊನೆಯ ವಾರದಲ್ಲಿ ಮುಂಬೈನಲ್ಲಿ ನಡೆಯಲಿರುವ ಪೂರ್ಣಾಧಿವೇಶನದಲ್ಲಿ ಹೊಸ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯುತ್ತದೆ. ಅಲ್ಲಿಯವರೆಗೆ ಚಿದಂಬರಂ ಸುಬ್ರಹ್ಮಣ್ಯಂರವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.

ADVERTISEMENT

ಭೂತ್‌ ಬಂಗ್ಲಾ

ನವದೆಹಲಿ, ನ. 22– ಮೈಸೂರು ಸಂಪುಟದಲ್ಲಿ ಎಸ್ಸೆನ್‌ರವರ ಸಹೋದ್ಯೋಗಿಯಾಗಿದ್ದ ಎಂ.ವಿ. ಕೃಷ್ಣಪ್ಪನವರ ದೃಷ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಈಗ ಎದುರಿಸುತ್ತಿರುವ ತೊಂದರೆಗಳಿಗೆ ಮುಖ್ಯ ಕಾರಣ ಅವರು (ಕಾಂಗ್ರೆಸ್ ಅಧ್ಯಕ್ಷರು) ದೆಹಲಿಯಲ್ಲಿ ವಾಸಿಸುತ್ತಿರುವ ಆಗಿಬಾರದ ಮನೆ.

‘ದೆಹಲಿಯ ಜನಪಥದಲ್ಲಿರುವ 6ನೇ ನಂಬರಿನ ಮನೆ ದೆವ್ವದ ಮನೆ’ ಎಂದು ನುಡಿದ ಕೃಷ್ಣಪ್ಪನವರು, ‘ಆ ಮನೆಯನ್ನು ಖಾಲಿ ಮಾಡಿ ಮೈಸೂರಿಗೆ ವಾಪಸಾಗಿ’ ಎಂದು ನಿಜಲಿಂಗಪ್ಪನವರಿಗೆ ಬುದ್ಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.