75 ವರ್ಷಗಳ ಹಿಂದೆ
ಬೆಂಗಳೂರು, ಜುಲೈ 25– ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ಮಧ್ಯಾಹ್ನ ಸುಮಾರು 5 ಗಂಟೆ ಚರ್ಚೆ ನಡೆಸಿ ಗೃಹ ಕೈಗಾರಿಕೆಗಳನ್ನು ಉತ್ತೇಜಿಸುವುದೇ ಕಾಂಗ್ರೆಸ್ ನೀತಿಯಾಗಿರುವುದರಿಂದ ನವಸ್ಪತಿಯನ್ನು ನಿಷೇಧಿಸುವ ಕ್ರಮವನ್ನು ಸಮರ್ಥಿಸಿತೆಂದು ತಿಳಿದುಬಂದಿದೆ.
ಅಖಿಲ ಮೈಸೂರು ಕಾಂಗ್ರೆಸ್ ಸಮಿತಿ ಆಗಸ್ಟ್ 26ನೇ ತಾರೀಕಿನಂದು ಸಮಾವೇಶಗೊಂಡು ವಿಸರ್ಜನೆಗೊಳ್ಳುವುದು.
ಮೈಸೂರು ಕಾಂಗ್ರೆಸ್ ಅಧ್ಯಕ್ಷೆ ಯಶೋಧರಮ್ಮನವರು ಅಧ್ಯಕ್ಷತೆವಹಿಸಿದ್ದರು.
ದೇಶದ ಆಹಾರ ಪರಿಸ್ಥಿತಿ ಬಗ್ಗೆ ಕಳವಳಪಡಲು ಕಾರಣವಿಲ್ಲ
ದೆಹಲಿ, ಜುಲೈ 25– ಭಾರತ ಸರ್ಕಾರದ ಆಹಾರ ಮತ್ತು ವ್ಯವಸಾಯ ಸಚಿವ ಕೆ.ಎಂ. ಮುನ್‌ಷಿ ಅವರು ‘ಭಾರತ ರಾಷ್ಟ್ರದಲ್ಲಿನ ಆಹಾರ ಪರಿಸ್ಥಿತಿಯ ವಿಚಾರದಲ್ಲಿ ಗಾಬರಿಪಡಬೇಕಾದ ಕಾರಣವೇ ಇಲ್ಲ. ಕ್ಷಾಮವೆಂಬುದಾಗಿ ಕೆಲ ವೃತ್ತಗಳಲ್ಲಿ ಹೇಳಿಕೊಳ್ಳುತ್ತಿರುವುದು ಆಧಾರರಹಿತ ಅಪಪ್ರಚಾರ. ಈ ರೀತಿಯ ಕೂಗಿನಿಂದ ಪದಾರ್ಥಗಳನ್ನು ಕೂಡಿಹಾಕಿಕೊಂಡು ಲಾಭ ಪಡೆಯುವವರಿಗೆ ಅವಕಾಶಕೊಟ್ಟಂತಾಗುತ್ತದೆ. ಪರಿಸ್ಥಿತಿಯನ್ನು ಹದಕ್ಕೆ ತರಬೇಕೆಂಬ ಸರ್ಕಾರದ ನೀತಿಗೆ ಧಕ್ಕೆ ತರುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.