ವೀರಪ್ಪನ್ ಬೇಡಿಕೆ;ಇಂದು ಚೆನ್ನೈನಲ್ಲಿ ಮಹತ್ವದ ಸಭೆ
ಚೆನ್ನೈ, ಆಗಸ್ಟ್ 5 (ಯುಎನ್‌ಐ, ಪಿಟಿಐ)– ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಮತ್ತು ಇತರ ಮೂವರನ್ನು ಬಿಡುಗಡೆ ಮಾಡಲು ವೀರಪ್ಪನ್ ಮುಂದಿಟ್ಟಿರುವ ಬೇಡಿಕೆಗಳಿಗೆ, ಉಭಯ ರಾಜ್ಯ ಸರ್ಕಾರಗಳ ನಿಲುವು ನಿರ್ಧರಿಸಲು ಎಸ್.ಎಂ. ಕೃಷ್ಣ ಮತ್ತುಎಂ. ಕರುಣಾನಿಧಿ ಅವರ ಮಧ್ಯೆನಾಳೆ ಇಲ್ಲಿ ಮಹತ್ವದ ಸಭೆ ನಡೆಯಲಿದೆ.
ಕೇಂದ್ರ ಸಚಿವ ಅರುಣ್ ಶೌರಿ ಮೇಲೆ ಹಲ್ಲೆ
ಮುಂಬೈ, ಆಗಸ್ಟ್ 5 (ಯುಎನ್‌ಐ, ಪಿಟಿಐ)– ಕೇಂದ್ರದ ಷೇರು ವಿಕ್ರಯ ಖಾತೆ ಸಚಿವ ಅರುಣ್ ಶೌರಿ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಇಲ್ಲಿ ನಡೆದಿದೆ. ಲಲಿತ್ ದೋಷಿ ಸ್ಮಾರಕ ಉಪನ್ಯಾಸ ನೀಡಲು ದಕ್ಷಿಣ ಮುಂಬೈಯಲ್ಲಿರುವ ಯಶವಂತ್ ರಾವ್ ಸಭಾಂಗಣಕ್ಕೆ ಬಂದಿದ್ದ ಶೌರಿ ಅವರ ಮೇಲೆ ಆರ್‌ಪಿಐ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದನಲ್ಲದೆ, ಅವರ ಅಂಗಿಯನ್ನು ಹರಿದುಹಾಕಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.