ADVERTISEMENT

ಅಂಚೆಪೆಟ್ಟಿಗೆ ಅಳವಡಿಸಿ

ಕುಂದು ಕೊರತೆ

ವಿ.ಹೇಮಂತ ಕುಮಾರ
Published 18 ಏಪ್ರಿಲ್ 2016, 19:33 IST
Last Updated 18 ಏಪ್ರಿಲ್ 2016, 19:33 IST

ಬಿಬಿಎಂಪಿ ವ್ಯಾಪ್ತಿಯ ಜಂಬೂಸವಾರಿ ದಿಣ್ಣೆ, ಸುರಭಿನಗರ, ನಾಯಕ್‌ ಲೇಔಟ್‌, ವೆಂಕಟೇಶ್ವರ ಲೇಔಟ್‌, ಶ್ರೀಮಾತಾ ಲೇಔಟ್‌, ಕೊತ್ತನೂರು ದಿಣ್ಣೆ ನಿವಾಸಿಗಳ ಪತ್ರ ವ್ಯವಹಾರದ ಅನೂಕೂಲಕ್ಕಾಗಿ ಸಮೀಪದಲ್ಲಿ ಎಲ್ಲಿಯೂ ಅಂಚೆಪೆಟ್ಟಿಗೆ ಅಳವಡಿಸಿಲ್ಲ.

ಪತ್ರಗಳ ರವಾನೆಗಾಗಿ ನೃಪತುಂಗ ನಗರ ಅಂಚೆ ಕಚೇರಿ ಅಥವಾ ಗೊಟ್ಟಿಗೆರೆ ಅಂಚೆ ಕಚೇರಿಗೆ ಹೋಗುವ ಅವಶ್ಯಕತೆ ಇದೆ. ಆದ್ದರಿಂದ ಈ ಮೇಲ್ಕಂಡ ನಿವಾಸಿಗಳ ಅನುಕೂಲಕ್ಕಾಗಿ ಬಿ.ಕೆ. ಸರ್ಕಲ್‌ ಬಸ್‌ ನಿಲ್ದಾಣದ ಹತ್ತಿರ ಇಲ್ಲವೆ ಸೂಕ್ತ ಕಂಡ ಸ್ಥಳದಲ್ಲಿ ಅಂಚೆ ಪೆಟ್ಟಿಗೆ ಅಳವಡಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.