ADVERTISEMENT

ಅಕ್ರಮ ಹಣ ವಸೂಲಿ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 18:30 IST
Last Updated 13 ಫೆಬ್ರುವರಿ 2012, 18:30 IST

ಜೆ.ಪಿ.ನಗರ 3ನೇ ಹಂತದಲ್ಲಿರುವ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದ ಹತ್ತಿರ ಫುಟ್‌ಪಾತಿನಲ್ಲಿ ನಂದಿನಿ ಹಾಲಿನ ಕೇಂದ್ರವಿದ್ದು, ಈ ಹಾಲಿನ ಕೇಂದ್ರದವರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ವಿಚಾರಿಸಿದರೆ ನಮಗೆ ವ್ಯಾಪಾರ ಗಿಟ್ಟುವುದಿಲ್ಲ ಎಂದು ದಬಾಯಿಸುತ್ತಾರೆ ಮತ್ತು ಸರಿಯಾದ ಸಮಯಕ್ಕೆ ಹಾಲಿನ ಸರಬರಾಜು ನಡೆಯುತ್ತಿಲ್ಲ. ಇದರಿಂದ ಗ್ರಾಹಕರು ಪ್ರತಿನಿತ್ಯ ತೊಂದರೆ ಎದುರಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಡೈರಿ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಸೂಕ್ತ ಕ್ರಮಕೈಗೊಳ್ಳಬೇಕು.

ಇದೇ ರೀತಿ ಜೆಪಿನಗರದ ಎಲ್ಲ ಬಡಾವಣೆಗಳಲ್ಲೂ ನಂದಿನ ಹಾಲಿನ ಕೇಂದ್ರದವರು ಹಾಲಿನ ಬೆಲೆಯನ್ನು ಹೆಚ್ಚಿಗೆ ವಸೂಲಿ ಮಾಡುತ್ತಾರೆ. ನಿಗದಿತ ದರ ಕೊಟ್ಟರೆ ಒಪ್ಪುವುದಿಲ್ಲ. ಆದ್ದರಿಂದ ಫುಟ್‌ಪಾತ್‌ಗಳಲ್ಲಿ ಹಾಲಿನ ವ್ಯಾಪಾರಕ್ಕೆ ಸರ್ಕಾರ ಕಡಿವಾಣ ಹಾಕಿ ನಂದಿನಿ ಹಾಲಿನ ಬೂತ್‌ಗಳನ್ನು ತೆರೆದು ಸಾರ್ವಜನಿಕರಿಗೆ ಸರಿಯಾದ ರೀತಿ ಹಾಲಿನ ಕೇಂದ್ರಗಳಲ್ಲಿ ಮಾರಾಟ ಮಾಡಿದರೆ ಅಕ್ರಮ ಹಣ ವಸೂಲಿಯನ್ನು ತಪ್ಪಿಸುವುದು ಸಾಧ್ಯ. ಈ ಕುರಿತು ಸರ್ಕಾರ ಮತ್ತು ಬೆಂಗಳೂರು ಡೈರಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT