ADVERTISEMENT

ಅಚಾತುರ್ಯದ ಘಟನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಜಾನಪದ ಲೋಕದಲ್ಲಿ `ದೊಡ್ಡಮನೆ~ಯಂತಹ ಪಾರಂಪರಿಕ ಸ್ಥಳವನ್ನು ಜನಪದ ಕಲಾವಿದರಿಗೆ ಹಾಗೂ ಸಂಸ್ಕೃತಿ ಬಲ್ಲ ಜವಾಬ್ದಾರಿಯುತ ಸಂಘ - ಸಂಸ್ಥೆಗಳಿಗೆ, ಸಭೆ ಸಮಾರಂಭಗಳನ್ನು ನಡೆಸಲು ನೀಡುವುದು ಕರ್ನಾಟಕ ಜಾನಪದ ಪರಿಷತ್ತಿನ  ಉದ್ದೇಶಗಳಲ್ಲಿ ಒಂದು.

ಇಂತಹ ಸಭೆ,ಸಮಾರಂಭಗಳಲ್ಲಿ ಮದ್ಯ - ಮಾಂಸಗಳ ಬಳಕೆ ಮಾಡುವುದು ಸರಿಯಲ್ಲ. ಜಾನಪದ ಲೋಕದ ಸ್ಥಾಪಕರಾದ ದಿ. ಎಚ್. ಎಲ್. ನಾಗೇಗೌಡರ ಉದ್ದೇಶವೂ ಆದೇ ಆಗಿತ್ತು.

 ಏ.18ರ ಪ್ರಜಾವಾಣಿಯಲ್ಲಿ ಪ್ರಕಟವಾದ ಒಂದು ಪತ್ರ ನೋಡಿ ವಿಷಾದವೆನಿಸಿತು. ಇದು ನಮ್ಮ ಸಂಸ್ಥೆಯ ಪದಾಧಿಕಾರಿಗಳ ಗಮನಕ್ಕೆಬಾರದೆ ನಡೆದ ಅಚಾತುರ್ಯ. ಇಂತಹ ಘಟನೆಗಳು ಇನ್ನು ಮುಂದೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಈ ಘಟನೆಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುತ್ತವೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.