ADVERTISEMENT

ಅತಿವೃಷ್ಟಿ ಪೀಡಿತರಿಗೂ ನೆರವಾಗಿ

ಜಿ.ಕೆ.ಉಮಾ, ಅರಕಲಗೂಡು
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಬರಪೀಡಿತ ಪ್ರದೇಶಗಳ ರೈತರ ಮಕ್ಕಳ ಶೈಕ್ಷಣಿಕ ಶುಲ್ಕವನ್ನು ಸರ್ಕಾರ  ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಒಳ್ಳೆಯ ನಿರ್ಧಾರವೇನೊ ಹೌದು. ಇದರಂತೆ ಅತಿವೃಷ್ಟಿಯಿಂದ ಹಾನಿ ಅನುಭವಿಸಿರುವ ರೈತರ ಮಕ್ಕಳ ಶಿಕ್ಷಣದ ವೆಚ್ಚವನ್ನೂ  ಸರ್ಕಾರ ಭರಿಸಲು  ಕ್ರಮ ಕೈಗೊಳ್ಳಬೇಕಿದೆ.

  ಬರಪ್ರದೇಶದ ರೈತರಿಗಿಂತ  ಅತಿವೃಷ್ಟಿ ಪೀಡಿತ ಪ್ರದೇಶದ ರೈತರು ಹೆಚ್ಚಿನ ಸಂಕಷ್ಟಕ್ಕೆ  ಒಳಗಾಗಿದ್ದಾರೆ. ಮಳೆ ಬೀಳದ ಕಾರಣ ಬರದ ನಾಡಿನ ರೈತರು  ವ್ಯವಸಾಯಕ್ಕೆ ಹೆಚ್ಚಿನ ಹಣವನ್ನು ವ್ಯಯ ಮಾಡಿರುವುದಿಲ್ಲ. ಆದರೆ ಅತಿವೃಷ್ಟಿ ಪೀಡಿತ ಪ್ರದೇಶದ ರೈತರ ಸ್ಥಿತಿ ಹೀಗಲ್ಲ. ಮಳೆ ಬಿದ್ದೊಡನೆ  ಸಾಲಮಾಡಿ ಇಲ್ಲವೇ ಮನೆಯಲ್ಲಿದ್ದ ಚೂರುಪಾರು ಚಿನ್ನವನ್ನು ಅಡವಿಟ್ಟಾದರೂ ಕೃಷಿಗೆ ಸಂಬಂಧಿಸಿದ  ಎಲ್ಲ ಕೆಲಸಗಳನ್ನು  ಪೂರ್ಣಗೊಳಿಸಿರುತ್ತಾರೆ. ಇನ್ನೇನು ಬೆಳೆ ಬಂತು ಎನ್ನುವ ನಿರೀಕ್ಷೆಯಲ್ಲಿರುವಾಗ  ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಇದೆ.

ಪಟ್ಟ ಶ್ರಮ ವ್ಯರ್ಥ; ಬೆಳೆಯೂ ಇಲ್ಲ, ಇದರ ಮಧ್ಯೆ ತಲೆಯ ಮೇಲೆ ಸಾಲದ ಹೊರೆ ಬೇರೆ. ಹೀಗಾಗಿ ಈ ರೈತರಿಗೆ  ಹೆಚ್ಚಿನ ನೆರವು ಅಗತ್ಯ. ಮುಖ್ಯಮಂತ್ರಿಯವರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.