ADVERTISEMENT

ಅನಾಗರಿಕ ನಡವಳಿಕೆ ಸಮರ್ಥನೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ನಟ ದರ್ಶನ್ ತನ್ನ ಮೇಲೆ ಕೆಟ್ಟದಾಗಿ ಹಲ್ಲೆ ಮಾಡಿದರೆನ್ನಲಾದ ಘಟನೆ ಆತಂಕ ತರುವ ಸಂಗತಿ. ಇದೆಲ್ಲ ಸಿನಿಮಾರಂಗದ ಗಣ್ಯರಿಗೆ ಮತ್ತು ಅವರ ಅಭಿಮಾನಿಗಳಿಗೆ ಸಂಸಾರದಲ್ಲಿ ನಡೆಯುವ ಸಾಮಾನ್ಯ ಘಟನೆಯಂತೆ!

ಘಟನೆ ನಡೆದ ದಿನದಂದು ಟಿ.ವಿ. ವಾಹಿನಿಯೊಂದರಲ್ಲಿ ದರ್ಶನ್‌ರ ಅಭಿಮಾನಿ ಹೆಣ್ಣು ಮಕ್ಕಳೂ ಸಹ ಗಂಡ ಹೆಂಡತಿಯರಲ್ಲಿ ಇದೆಲ್ಲ ಸಾಮಾನ್ಯ. ವಿಜಯಲಕ್ಷ್ಮಿಯವರು ಇದನ್ನು ಬೀದಿಗೆ ತರಬಾದಿತ್ತು ಎಂಬ ಹೇಳಿಕೆ ಕೊಟ್ಟರು. ಹೆಣ್ಣು ಮಕ್ಕಳಾಗಿ ನೊಂದ ಹೆಣ್ಣಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಬೇಕಾದ ಮಹಿಳೆಯರೂ ಈ ರೀತಿ ಹೇಳಿದ್ದು ವಿಪರ್ಯಾಸ.

ಯಾವುದೇ ವ್ಯಕ್ತಿಗೆ ಏಕ ಕಾಲದಲ್ಲಿ ಹಣ ಮತ್ತು ಜನಪ್ರಿಯತೆ ದೊರಕಿ ಬಿಟ್ಟರೆ ಇಂತಹ ದುರಹಂಕಾರವನ್ನು ಬೆಳೆಸಿಕೊಂಡು ಅಮಾನವೀಯವಾಗುತ್ತಾರೆ. ಹಾಗೆ ನೋಡಿದರೆ ಕನ್ನಡದ ಯುವ ನಟರಲ್ಲಿ ದರ್ಶನ್ ನಿಜಕ್ಕೂ ಒಬ್ಬ ಪ್ರತಿಭಾವಂತ ನಟ. ಇವರು ಹೆಗ್ಗೋಡಿನ ನೀನಾಸಮ್‌ನಲ್ಲಿ ಪದವಿ ಪಡೆದವರು. ನಾಗರಿಕ ಸಮಾಜ ಇವರಿಂದ ಇಂತಹ ಆನಾಗರಿಕ ನಡವಳಿಕೆಯನ್ನು ನೀರಿಕ್ಷಿಸಿರಲಿಲ್ಲ. ಇದನ್ನು ಸಮರ್ಥಿಸುವುದು ಸರ್ವಥಾ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.