ADVERTISEMENT

ಅನಾಹುತ ತಪ್ಪಿಸಿ

ಕುಂದು ಕೊರತೆ

ಎಂ.ವೆಂಕಟಪ್ಪ
Published 11 ಜನವರಿ 2016, 19:54 IST
Last Updated 11 ಜನವರಿ 2016, 19:54 IST

ಜನನಿಬಿಡ ರಸ್ತೆಯ ಮಧ್ಯದಲ್ಲೇ ವಿದ್ಯುತ್‌ ಕಂಬ ಮುರಿದುಬಿದ್ದು, ತಿಂಗಳುಗಳಾದರೂ ಅದನ್ನು ತೆರವುಗೊಳಿಸಿಲ್ಲ. ಬೆಳ್ಳಂದೂರು ಕೆರೆಯ ಯಮಲೂರು ಕಡೆ ಕೆಲವೇ ಗಜಗಳ ದೂರದಲ್ಲಿದ್ದರೂ ಎಲ್ಲರಿಗೂ ಇಲ್ಲಿನ ನೊರೆಯ ಸಮಸ್ಯೆ ಮಾತ್ರ ಕಾಣಿಸಿತು.

ಬೆಂಗಳೂರು ಪೂರ್ವ ಪಣತೂರು ಹೊರ ವರ್ತುಲ ರಸ್ತೆಯಿಂದ ಚಲ್ಲಗಟ್ಟ ಮಾರ್ಗ ಐ.ಬಿ.ಎಂ. ಮತ್ತು ಹಳೇ ವಿಮಾನ ನಿಲ್ದಾಣದ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನೂರಾರು ವಾಹನಗಳು ದಿನನಿತ್ಯ ಸಾಗಬೇಕು. ರಸ್ತೆಯ ಮಧ್ಯದಲ್ಲೇ ಇರುವ ಶಿಥಿಲಗೊಂಡ ಕಂಬಗಳನ್ನು ಕೂಡಲೇ ಸ್ಥಳಾಂತರಿಸದಿದ್ದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ರಸ್ತೆಯೂ ತೀರ ಹದಗೆಟ್ಟಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸುವರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.