ADVERTISEMENT

ಅಪಾಯಕಾರಿ ಚಾಲಕರು

ಲಿಂಗಯ್ಯ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಇದರ ಮಧ್ಯೆ ವಾಹನಗಳ ಚಾಲಕರು ಮೊಬೈಲ್‌ ಬಳಕೆ ಮಾಡುವುದು ಬಹಳ ಜಾಸ್ತಿಯಾಗಿದೆ. ಇವರ ಗಮನವೆಲ್ಲ ಮೊಬೈಲ್‌ ಸಂಭಾಷಣೆ ಕಡೆ ಇರುವ ಕಾರಣ ಅಕ್ಕಪಕ್ಕದ ವಾಹನಗಳು ಮತ್ತು ಸಂಚಾರ ನಿಯಮದ ಬಗ್ಗೆ ಗಮನವಿರುವುದಿಲ್ಲ. ಈ ಬೆಳವಣಿಗೆ ಪಾನಮತ್ತ ಚಾಲಕರಿಗಿಂತಲೂ ಅಪಾಯಕಾರಿ.

ದಯಮಾಡಿ ಸಂಬಂಧಪಟ್ಟವರು, ಇಂತಹ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.