ADVERTISEMENT

ಅಮಾನವೀಯ ನಡವಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಇತ್ತೀಚೆಗೆ ಜಮಖಂಡಿಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹಣಕ್ಕಾಗಿ ಎರಡು ಶವಗಳನ್ನು ಶವಾಗಾರದಲ್ಲಿಯೇ ಒತ್ತೆ ಇಟ್ಟುಕೊಂಡು ಹಣಕ್ಕಾಗಿ ಪೀಡಿಸಿದ ಹೃದಯ ವಿದ್ರಾವಕ ಘಟನೆ ಮಾಧ್ಯಮಗಳ ಮೂಲಕ ಜನರ ಗಮನಕ್ಕೆ ಬಂದಿದೆ.

ರಸ್ತೆ ಅಪಘಾತದಲ್ಲಿ ಸತ್ತ ಇಬ್ಬರು ವ್ಯಕ್ತಿಗಳ ಶವ ಪರೀಕ್ಷೆ ಮಾಡಲು ಅವರ ಬಂಧುಗಳಿಂದ ಎರಡು ಸಾವಿರ ರೂ. ಲಂಚ ಕೇಳಿದ್ದು ಅವರು 1600 ರೂಪಾಯಿ ನೀಡಿ ಮಿಕ್ಕ 400 ರೂಪಾಯಿಗಳು ಪಂಚನಾಮೆ ಬಳಿಕ ನೀಡುವುದಾಗಿ ತಿಳಿಸಿದ್ದರು.

`ಲಂಚದ ಬಾಕಿ ಹಣ ನೀಡಿದ ನಂತರವೇ ಶವಗಳನ್ನು ಪಡೆಯಿರಿ~ ಎಂಬ ಧೋರಣೆಯಲ್ಲಿ ವರ್ತಿಸಿದ ಸಿಬ್ಬಂದಿಯ ಧೋರಣೆ ಅಮಾನವೀಯ ಹಾಗೂ ಖಂಡನೀಯ.

ಆಪ್ತರನ್ನು ಕಳೆದುಕೊಂಡು ದುಃಖದಲ್ಲಿರುವ ಜನರಿಂದಲೂ ಲಂಚಕ್ಕೆ ಕೈಚಾಚುವ ಈ ವ್ಯವಸ್ಥೆಗೆ ಯಾರು ಹೊಣೆ? ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಲಂಚಕೋರ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT