ಇತ್ತೀಚಿನ ದಿನಗಳಲ್ಲಿ ಜಾನಪದ ಕಲಾವಿದರನ್ನು ಕರೆಯಿಸಿ ಪ್ರದರ್ಶಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ತಮಟೆ ಕಲಾವಿದರನ್ನು ಆಹ್ವಾನಿಸಲಾಗಿತ್ತು.
ಇತರ ಕಾರ್ಯಕ್ರಮಗಳೂ ಇದ್ದವು. ಆದರೆ ಕಾರ್ಯಕ್ರಮ ವಿಧ್ಯುಕ್ತವಾಗಿ ಪ್ರಾರಂಭವಾಗುವ ಮೊದಲೇ ತಮಟೆ ಕಲಾವಿದರಿಗೆ ತಮಟೆ ಬಾರಿಸುವಂತೆ ಹೇಳಲಾಯ್ತು. ಅವರೂ ಸಿದ್ಧರಾಗಿ, ವಿಧೇಯರಾಗಿ ಬಾರಿಸತೊಡಗಿದರು. ಇದು ಹೇಗೆ ಕಂಡಿತೆಂದರೆ ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುವ ಮುಂಚೆ ಜನರನ್ನು ಸೆಳೆಯಲು ಸೈರನ್ ಮೊಳಗಿಸುವಂತೆ. ಅಷ್ಟರಲ್ಲಾಗಲೇ ಚಿತ್ರಕಲಾ ಪ್ರದರ್ಶನ ಮಾಡುತ್ತಿದ್ದ ಕಲಾವಿದರು ಬಂದು ಈ ಶಬ್ದ ನಮ್ಮ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಯೋಜಕರು ಕೂಡಲೇ ಮುಲಾಜಿಲ್ಲದೆ ತಮಟೆ ವಾದಕರನ್ನು ಮುಖ್ಯದ್ವಾರದ ಆಚೆ ಹೋಗಿ ಬಾರಿಸಲು ಅಟ್ಟೇಬಿಟ್ಟರು. ಇದರಿಂದ ಆ ಕಲಾವಿದರಿಗೆ ಮಾನಸಿಕವಾಗಿ ಎಷ್ಟು ಗಾಸಿಯಾಯಿತೋ ನಾನರಿಯೆ.
ನನ್ನ ಕಳಕಳಿ ಇಷ್ಟೇ. ಆ ಕಲಾವಿದರನ್ನು ಕರೆಸಿದ್ದೇ ಆದರೆ ಗೌರವಯುತವಾಗಿ ನಡೆಸಿಕೊಳ್ಳಿ. ಸಂಬಂಧಪಟ್ಟವರು ಗಮನಿಸಿ ಕ್ರಮ ಕೈಗೊಳ್ಳುವರೆಂದು ಆಶಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.