ADVERTISEMENT

ಆಘಾತಕಾರಿ ಸುದ್ದಿ!

ಕೌಡ್ಲೆ ರವಿ ಬೆಂಗಳೂರು
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಮಾಜಿ ಸಚಿವರುಗಳ ಮತ್ತು ಶಾಸಕರುಗಳ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಲಾಗಿದೆ. 2008 ಕ್ಕೆ ಹೋಲಿಸಿದರೆ 2013 ರಲ್ಲಿ ಇವರುಗಳ ಆಸ್ತಿ ದ್ವಿಗುಣಗೊಂಡಿದೆ. ಎಲ್ಲರೂ ಅಭಿವದ್ಧಿ ಹೊಂದಿರುತ್ತಾರೆ ಅಷ್ಟೆ ಎನ್ನುವಿರಾ? ಇದು ಕಟು ಸತ್ಯ ಇದನ್ನು ಯಾರು ಅಲ್ಲಗಳೆಯುವಂತಿಲ್ಲ.

ಆದರೂ ಒಂದು ವಿಚಿತ್ರವೆಂದರೆ 8 ಶಾಸಕರುಗಳ ಆಸ್ತಿ ಮೌಲ್ಯ 2008 ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ, ಮತ್ತೊಂದು ಅಘಾತಕಾರಿಯಾದ ವಿಷಯವೇನೆಂದರೆ ಪ್ರಸ್ತುತ ಉನ್ನತ ಶಿಕ್ಷಣ ಸಚಿವರ ಆಸ್ತಿ 2008ಕ್ಕೆ ಹೋಲಿಸಿದರೆ 2013 ರಲ್ಲಿ ಶೇ 50 ಕಡಿಮೆಯಾಗಿದೆ.  ಇದೊಂದು ಆತಂಕಕಾರಿ ಸುದ್ದಿಯೆನಿಸುವುದಿಲ್ಲವೇ. ಸಾಮಾನ್ಯ ಪಾಲಿಕೆ ಸದಸ್ಯರೇ ವಿಧಾನಸಭೆ ಚುನಾವಣೆಗೆ ನಿಲ್ಲಲ್ಲು ನಾ ಮುಂದು ತಾಮುಂದು ಎನ್ನುತ್ತಿರುವಾಗ ಈ 8 ಶಾಸಕರ ವಿಷಯ ಕೇಳಿ ದಿಗ್ಬ್ರಮೆಯಾಗದಿರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.