ಒಂದು ಐಪಿಎಲ್ ಕ್ರಿಕೆಟ್ ತಂಡ
ಇನ್ನೊಂದು `ಬರ~ ಅಧ್ಯಯನ ತಂಡ
ಎರಡು ತಂಡಗಳಿಗೆ ಒಬ್ಬೂಬ್ಬ
ಮುಖಂಡ
ಐಪಿಎಲ್‌ನಲ್ಲಿ ರನ್‌ಗಾಗಿ
ಹರಿಸುತ್ತಿದ್ದಾರೆ ಬೆವರು.
`ಬರ~ ಪ್ರದೇಶಗಳಲ್ಲಿ ಬೆವರು
ಹರಿಸಿದರೂ ಇಲ್ಲ ಕುಡಿಯಲು ನೀರು
ಅಲ್ಲಿ ನೀರಿನಂತೆ ಹರಿದಾಡುವ ಹಣ
ಇಲ್ಲಿ ನೀರಿಗಾಗಿ ಪರದಾಡುವ ಜನ
ಐಪಿಎಲ್‌ನಲ್ಲಿ ಫೋರ್, ಸಿಕ್ಸರ್
ರನ್‌ಗಳ ಅಬ್ಬರ
ನಮಗೆ ಒಂದು ಕೊಡ ನೀರು ಸಿಕ್ಕರೆ
ಅದೇ ಹಬ್ಬದ ಸಡಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.