ADVERTISEMENT

ಆರ್ಥಿಕ ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

 ನನ್ನ ಪತ್ನಿ ವಿಶಾಲಾಕ್ಷಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾಳೆ. ಈಗಾಗಲೇ ರೂ.5.5 ಲಕ್ಷ ವೆಚ್ಚವಾಗಿದೆ. ಈಗ ಮತ್ತೆ ಕಾಯಿಲೆ ಮರುಕಳಿಸಿ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
 
ಚಿಕ್ಕಮಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ನನಗೆ ತಿಂಗಳಿಗೆ ರೂ.4,000 ಸಂಬಳವಿದೆ. ಇದರಲ್ಲಿ ಜೀವನ ನಿರ್ವಹಣೆ ಮತ್ತು ಪತ್ನಿಯ ಚಿಕಿತ್ಸೆ ನಡೆಯಬೇಕಿದೆ. ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದು, ಪತ್ನಿಯನ್ನು ಉಳಿಸಿಕೊಳ್ಳಲೇಬೇಕಾಗಿದೆ.

ಉದಾರಿಗಳಾದ ದಾನಿಗಳು ಚಿಕ್ಕಮಗಳೂರಿನ ನನ್ನ ಐಡಿಬಿಐ ಬ್ಯಾಂಕ್‌ನಲ್ಲಿರುವ ಖಾತೆ ನಂ 333104000016719 ಇಲ್ಲಿಗೆ  ನೆರವು ನೀಡುವಂತೆ ಕೋರುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.