ADVERTISEMENT

ಆಸ್ತಿ ವಿವರ ನೀಡದವರ ಸದಸ್ಯತ್ವ ರದ್ದಾಗಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ - 2003 ಸೆಕ್ಷನ್ 308 (ಸಿ) ಪ್ರಕಾರ ವೆಚ್ಚದ ವಿವರ ನೀಡದ ಅಭ್ಯರ್ಥಿಗಳು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅನರ್ಹರು. ಇದೇ ಕಾಯ್ದೆಯ ಸೆಕ್ಷನ್ 167 ಜೆ -1 (ಸಿಸಿ) ಪ್ರಕಾರ ಅನರ್ಹತೆ ಮೂರು ವರ್ಷಗಳ ಬಳಿಕ ರದ್ದಾಗುತ್ತದೆ. ಹೀಗೆಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ರವೀಂದ್ರನಾಥ ಸ್ಪಷ್ಟಪಡಿಸಿದ್ದಾರೆ.

ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ವೆಚ್ಚದ ವಿವರ ನೀಡದೆ ಅನರ್ಹಗೊಂಡವರು ಮಾತ್ರ ಆರು ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡವರ ಪಟ್ಟಿಯನ್ನು ಪತ್ರಿಕೆಗಳಲ್ಲಿ ಜಾಹೀರು ಮಾಡಲಿ. ಅನರ್ಹತೆಯ ಪರಿಣಾಮ ಮೇಲ್ಕಂಡ ಎರಡೂ ಚುನಾವಣೆಗಳಿಗೆ ‘ಆರು ವರ್ಷ’ ಇರಲಿ. ಪಂಚಾಯತ್ ಕಾಯ್ದೆಗೆ ತಿದ್ದುಪಡಿ ಬರಲಿ. ಈ ಬಗ್ಗೆ ಕೇಂದ್ರ ಕಾನೂನು ಇಲಾಖೆ ಹಾಗೂ ಕಾನೂನು ಪಂಡಿತರು ಒಂದೆಡೆ ಕೂತು ಚರ್ಚಿಸಿ ಏಕರೂಪದ ತೀರ್ಮಾನಕ್ಕೆ ಬರುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ತಕ್ಷಣ ಮಾಡಬೇಕಾದ ಜನಪರ ಕೆಲಸ ಇದಾಗಿದೆ. ಸರ್ಕಾರ ಕಾನೂನು ಮಾಡುತ್ತದೆ ನ್ಯಾಯಾಂಗ ವಿಮರ್ಶೆ ಮಾಡುತ್ತದೆ, ಅಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT