ADVERTISEMENT

ಇಂಧನ ತೈಲ ಅಪವ್ಯಯ ಬೇಡ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಇಂಧನ ತೈಲ ಬೆಲೆ ಏರಿಕೆಗೆ ಭಾರತೀಯರು ಬಳಸುವ ಐಷಾರಾಮಿ ವಾಹನಗಳೇ ಕಾರಣ ಎಂದು ಹೇಳಿದ್ದಾರೆ. ಇದು ಪೂರ್ಣ ಸತ್ಯವಲ್ಲ. ನಮ್ಮ ದೇಶದಲ್ಲಿ ಸರ್ಕಾರ ಹಾಕಿದ ಹೆಚ್ಚು ತೆರಿಗೆಗಳಿಂದ ತೈಲ ಬೆಲೆ ಹೆಚ್ಚಾಗಿದೆ.

ಆದರೂ ಅಮೆರಿಕಾ ಅಧ್ಯಕ್ಷರ ಹೇಳಿಕೆಯನ್ನು ಸಂಪೂರ್ಣ ತಳ್ಳಿಹಾಕುವಂತಿಲ್ಲ. ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ವಾಹನಗಳನ್ನು ಬಳಸುವ ನಿರ್ಧಾರ ಎಲ್ಲರೂ ಮಾಡಬೇಕಿದೆ.
 
ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳೂ ಸೇರಿದಂತೆ ಮೇಲ್ಮಧ್ಯಮ ವರ್ಗದ ಸಿರಿವಂತ ಜನರು ಪ್ರತಿಷ್ಠೆಗಾಗಿ ಐಷಾರಾಮಿ ವಾಹನಗಳನ್ನು ಬಳಸುವ ಪರಿಪಾಠ ಹೆಚ್ಚಿದೆ.

ಮಹಾ ನಗರಗಳಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರೈಲು, ಬಸ್ಸು ಇತ್ಯಾದಿ ಸಾರ್ವಜನಿಕ ವಾಹನಗಳನ್ನು ಬಳಸುವ ಮೂಲಕ ಇಂಧನ ತೈಲ ಬಳಕೆಯನ್ನು ಕಡಿಮೆ ಮಾಡಬಹುದು. ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಉಳಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.