ADVERTISEMENT

ಇದು ‘ದೊಡ್ಡ ಹಬ್ಬ’...

ಎಚ್.ಬಿ.ಮಂಜುನಾಥ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

1990ನೇ ಇಸವಿಯ ಆ ದಿನ ನಾವು ಮಧ್ಯಾಹ್ನದ ಊಟಕ್ಕೆ ಕುಳಿತಾಗ ನಮ್ಮ ತಾಯಿ ಎಚ್‌.ಟಿ. ಲಕ್ಷ್ಮೀದೇವ­ಮ್ಮನವರು ‘ಪಾಯಸ’ ಬಡಿಸಿದರು. ನಮಗೆಲ್ಲಾ ಆಶ್ಚರ್ಯವಾಯ್ತು, ‘ಅಮ್ಮಾ... ಇವತ್ತೇನು ವಿಶೇಷ?, ಯಾವ ಹಬ್ಬ ಹುಣ್ಣಿಮೇನೂ ಇವತ್ತು ಇಲ್ಲ, ಪಾಯಸ ಯಾಕೆ ಮಾಡಿದ್ದೀರಿ?’ ಅಂತ ಕೇಳಿದೆವು.

‘ಅಲ್ರೋ.... ಪೇಪರು ಓದ್ತೀರಿ, ರೇಡಿಯೊ ಕೇಳ್ತೀರಿ, ಟಿ.ವಿ. ನೋಡ್ತೀರಿ, ಆದ್ರೂ ಇವತ್ತೇನು ವಿಶೇಷ?! ಅಂತ ಕೇಳ್ತೀರಲ್ಲೋ!, ಇಪ್ಪತ್ತೇಳು ವರ್ಷಗಳ ಸೆರೆವಾಸದ ಬಳಿಕ ನೆಲ್ಸನ್‌ ಮಂಡೇಲಾ ಇವತ್ತು ಜೈಲಿಂದ ಹೊರಬರ್‍ತಿದಾರೆ, ಇವತ್ತು ಬರೀ ಹಬ್ಬವಲ್ಲ, ವಿಶೇಷ ಹಬ್ಬ... ‘ದೊಡ್ಡಹಬ್ಬ’, ಅದಕ್ಕೇ ಪಾಯಸ...’ ಎಂದರು ನಮ್ಮಮ್ಮ.

‘11 ಫೆಬ್ರುವರಿ 1990’ರ ಆ ದಿನವನ್ನೂ, ನೆಲ್ಸನ್‌ ಮಂಡೇಲಾರನ್ನೂ ನಾವೆಂದೂ ಮರೆಯದಂತೆ ಮಾಡಿದರು ನಮ್ಮಮ್ಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.