ADVERTISEMENT

ಇದೆಂಥ ಹುಚ್ಚು ಕ್ರಮ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ರಸ್ತೆಗಳ ಮೇಲೆ ರಾತ್ರಿ ಹೊತ್ತು ಕಾರು ನಿಲುಗಡೆ ಮಾಡಿದರೆ ಮಾಸಿಕ 50 ರೂ. ವಸೂಲು ಮಾಡುವ ಬಗ್ಗೆ ಬಿ.ಬಿ.ಎಂ.ಪಿ. ಚಿಂತಿಸುತ್ತಿರುವುದು ಪರಮ ಮೂರ್ಖತನದ ವಿಚಾರ.

ದುರ್ವೆಚ್ಚ ಮತ್ತು ದುರುಪಯೋಗ ವಾಗುತ್ತಿರುವ ಸಂಪನ್ಮೂಲಗಳನ್ನು ಉಳಿಸುವತ್ತ ಚಿಂತನೆ ಮಾಡಿದರೆ ರಸ್ತೆ ಪಾರ್ಕಿಂಗ್ ತೆರಿಗೆಯಂತಹುದಕ್ಕೆ ಕೈಹಾಕುವ ಪ್ರಮೇಯವೇ ಇರುವುದಿಲ್ಲ.

ಕಾರು ತೊಳೆದರೆ ರಸ್ತೆ ಗಲೀಜಾಗುತ್ತೆ ಚೊಕ್ಕಟಗೊಳಿಸಬೇಕಾಗುತ್ತೆ ಎನ್ನುವ ಅವರ ಯೋಚನೆಯೂ ಬುಡವಿಲ್ಲದ್ದು. ಬಹಳಷ್ಟು ಕಾರು ಮಾಲೀಕರು ಪ್ರತಿ ದಿನ ಕಾರನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳುತ್ತ ಆಗಾಗ್ಗೆ ಕಾರು ತೊಳೆಯುವ ಕೇಂದ್ರಗಳಲ್ಲಿ ಸೇವೆ ಪಡೆಯುತ್ತಾರೆ.

ಕೆಲವು ಸಲ ರಸ್ತೆಯಲ್ಲೇ ತೊಳೆದರೂ ರಸ್ತೆ ಮುಂದೆ ಗೃಹಿಣಿಯರು ಅಥವಾ ಮನೆ ಕೆಲಸದವರು ಆ ಗಲೀಜು ನೀರನ್ನು ಚರಂಡಿಗೆ ಬಳಿದು ರಸ್ತೆ ಶುದ್ಧಿ ಮಾಡಿಕೊಳ್ಳುತ್ತಾರೆ (ಇಲ್ಲದಿದ್ದರೆ ಪಕ್ಕದ ಮನೆಯವರು ಬಿಡಬೇಕಲ್ಲಾ!) ಇಂಥದ್ದಕ್ಕೆಲ್ಲ ತೆರಿಗೆ ಹಾಕುತ್ತಾ ಹೋದರೆ ಮುಂದೆ ರಸ್ತೆ ಮೇಲೆ ಓಡಾಡುವುದಕ್ಕೂ ಬಹಳ ಹೊತ್ತು ನಿಂತುಕೊಳ್ಳುವುದಕ್ಕೂ ಚಿಕ್ಕಪ್ರಮಾಣದಲ್ಲಿ ಗಿಡ ಸಸಿ ಪಾಟ್ ಇಟ್ಟುಕೊಳ್ಳುವುದಕ್ಕೂ ತೆರಿಗೆಗಳು ಹಾಕುತ್ತಲೇ ಹೋಗಬಹುದು. ಇಂತಹ ವಿಚಿತ್ರಗಳಿಗೆ ಬಿ.ಬಿ.ಎಂ.ಪಿ. ಕೈಹಾಕದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.