ADVERTISEMENT

ಇದೇ ಸಂಪ್ರದಾಯವಾಗದಿರಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ರಾಜ್ಯದ ಕಾನೂನು ಸಚಿವ ಸುರೇಶ್‌ಕುಮಾರ್‌ರವರು ರಾಜ್ಯದ ಅಡ್ವೋಕೇಟ್ ಜನರಲ್‌ರವರು ನೀಡಿದ ಕ್ಲೀನ್‌ಚಿಟ್  ಹಿನ್ನೆಲೆಯಲ್ಲಿ ತಮ್ಮ ರಾಜಿನಾಮೆ ವಾಪಸು ಪಡೆದಿದ್ದಾರೆ. ಸುರೇಶ್‌ಕುಮಾರ್ ದಕ್ಷ, ಪ್ರಾಮಾಣಿಕ ಮತ್ತು ಉತ್ತಮ ಜನಸೇವಕರೆಂದು ಹೆಸರು ಪಡೆದಿದ್ದಾರೆ.

ಆದರೆ ಇದೇ ಸಂಪ್ರದಾಯವನ್ನು ರಾಜ್ಯದ ಇತರೆ ಆಪಾದಿತ ರಾಜಕಾರಣಿಗಳು, ಅಧಿಕಾರಿಗಳು, ಮಠಾಧೀಶರು ಬಳಸಿಕೊಳ್ಳುವ ಸಾಧ್ಯತೆಗಳಿವೆ. ರಾಜ್ಯದ ಅಡ್ವೋಕೇಟ್ ಜನರಲ್‌ರವರು ರಾಜ್ಯ ಸರ್ಕಾರದಿಂದ ನೇಮಕಾತಿ ಹೊಂದಿದ ರಾಜ್ಯದ ಉಚ್ಚ ಅಧಿಕಾರಿ.

ಅಂತವರಿಗೆ ಉಳಿದ ಆಪಾದಿತ ರಾಜಕಾರಣಿಗಳು ಹಾಗೂ ಇತರರು ತಮ್ಮ ಪ್ರಭಾವವನ್ನು ಬಳಸಿ, ಸುರೇಶ್‌ಕುಮಾರ್‌ರವರಿಗೆ ನೀಡಿದಂಥ ಅಭಿಪ್ರಾಯವನ್ನು ತಮಗೂ ನೀಡಬೇಕೆಂಬ ಒತ್ತಾಯ ತರಬಹುದು.
 
ಹಾಗೆಯೇ ಅಡ್ವೋಕೇಟ್ ಜನರಲ್‌ರವರು ಅಂಥವರ ಒತ್ತಾಯಕ್ಕೆ ಮಣಿದರೆ, ನ್ಯಾಯಾಲಯಗಳು, ಲೋಕಾಯುಕ್ತ ನ್ಯಾಯಾಲಯಗಳ ಅಸ್ತಿತ್ವದ ಪ್ರಶ್ನೆ ಬರುತ್ತದೆ. ಆದ್ದರಿಂದ ಈ ರೀತಿಯ ಸಂಪ್ರದಾಯ ಮುಂದುವರಿಯದಿರಲಿ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.