
ವಿದ್ಯಾಮಾನ್ಯ ನಗರದಿಂದ ಶಿವಾಜಿನಗರಕ್ಕೆ ಈಗಾಗಲೇ ಮಾರ್ಗ ಸಂಖ್ಯೆ 243/ಇ ಬಸ್ ಚಲಿಸುತ್ತಿದೆ. ಹೊರಡುವ ಸ್ಥಳದಲ್ಲಿಯೇ ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುವುದರಿಂದ ನಡುದಾರಿಯಲ್ಲಿ ಹತ್ತುವ ಮಹಿಳೆಯರು, ಶಾಲಾ ಮಕ್ಕಳು, ವಯೋವೃದ್ಧರು ವಿಧಿಯಿಲ್ಲದೆ ಹತ್ತಿದ ಸ್ಥಳದಿಂದ ಇಳಿಯುವವರೆಗೂ ನಿಂತೇ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ. ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನಗಳೂ ಕೂಡ ಅವರಿಗೆ ಲಭಿಸುತ್ತಿಲ್ಲ. ಈ ವಿಷಯವಾಗಿ ಸಂಬಂಧಪಟ್ಟವರ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ.
ಹೆಚ್ಚಿನ ಜನರು ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈಗಿರುವ ಮಾರ್ಗ ಸಂಖ್ಯೆ 243/ಇ ಬಸ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಈ ಮೂಲಕ ಒಂದು ಬಸ್ಸಿನಲ್ಲಿ ನಾಲ್ಕು ಬಸ್ಸಿನ ಜನರನ್ನು ತುಂಬಿ ಪ್ರಯಾಣಿಸುವುದನ್ನು ತಪ್ಪಿಸಿ ಸೂಕ್ತ ಸೌಲಭ್ಯವನ್ನು ಒದಗಿಸಬೇಕೆಂದು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.