
ಪ್ರಜಾವಾಣಿ ವಾರ್ತೆಬಾಪೂಜಿನಗರ 2ನೇ ಹಂತದಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನ ಇಲಿ, ಹೆಗ್ಗಣಗಳ ಗೂಡಾಗಿದೆ. ಪ್ಲಾಸ್ಟಿಕ್ ಚೀಲ, ಕವರ್, ಬಾಟಲಿಗಳು ಎಲ್ಲೆಡೆ ರಾರಾಜಿಸುತ್ತಿವೆ.ಉದ್ಯಾನದ ಪಕ್ಕದಲ್ಲಿ ಮುನೇಶ್ವರ, ಗಣಪತಿ, ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಅಲ್ಲಿ ನಿಲ್ಲಿಸುವ ಕಾರುಗಳ ಗ್ಲಾಸ್ ಒಡೆದು, ಟೈರ್ ಪಂಕ್ಚರ್ ಮಾಡಿ ಕೆಲ ಪುಂಡರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ.
4ನೇ ಮುಖ್ಯರಸ್ತೆಯಲ್ಲಿ ಕಳ್ಳತನಗಳು ಹೆಚ್ಚಾಗಿವೆ. ಆದ್ದರಿಂದ ಉದ್ಯಾನಕ್ಕೆ ಹಾಗೂ ದೇವಸ್ಥಾನಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸಿ ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಅನುಕೂಲ ಮಾಡಿಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.