ADVERTISEMENT

ಎತ್ತಿನಹೊಳೆ: ಶೀಘ್ರ ಕಾರ್ಯಗತವಾಗಲಿ

ಟಿ.ವೆಂಕಟೇಶ
Published 2 ಡಿಸೆಂಬರ್ 2014, 19:30 IST
Last Updated 2 ಡಿಸೆಂಬರ್ 2014, 19:30 IST

ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆ ಕುರಿತು ಭರಪೂರ ಭರವಸೆ ನೀಡುವ ರಾಜಕೀಯ ಮುಖಂಡರು ಚುನಾವಣೆ ಮುಗಿಯುತ್ತಲೇ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ಮರೆತುಬಿಡುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಬರಪೀಡಿತ ಜಿಲ್ಲೆಗಳ ಜನರ ಆಸೆ ಚಿಗುರಿಸಿ ನಂತರ ಅದು ಕಮರುವಂತೆ ಮಾಡು­ವುದು ಸರಿಯೆ?

ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಕೊಸ­ರಾಡಬೇಕಾದ ಸ್ಥಿತಿ ಇದೆ. ಅಂತರ್ಜಲ ಮಟ್ಟ ವಿಪ­ರೀತ ಕುಸಿದಿದೆ. ಕೊಳವೆ ಬಾವಿಗಳನ್ನು 1000 ಅಡಿ ತೋಡಿಸಿದರೂ ನೀರು ಸಿಗದ ಸ್ಥಿತಿ ಒದಗಿದೆ.  ಕೆರೆ­ಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಿ ರೈತರ ಬದುಕು ಸುಧಾರಿಸಬಹುದು. ಅದಕ್ಕೆ ಮಾರ್ಗ ಯಾವುದಾದರೂ ಆಗಿರಲಿ, ಅದನ್ನು ಕಾರ್ಯಗತಗೊಳಿಸಬೇಕಾದ ಅಗತ್ಯ ಇದೆ.

ಈ ಎರಡೂ ಜಿಲ್ಲೆಗಳ ಜನರ ಬದುಕು ಮಳೆ­ಯಿ­ಲ್ಲದೆ ಸೊರಗಿದೆ. ಆದರೆ, ಅತಿವೃಷ್ಟಿಗೆ ಸಿಗುವ ಸ್ಪಂದನ ಅನಾವೃಷ್ಟಿಗೆ ಸಿಗುವುದಿಲ್ಲ. ಮಳೆ­ಯಿಂದ ಬೆಳೆ ಹಾನಿಗೊಳಗಾದ ಕೂಡಲೇ ಕೇಂದ್ರ­ದಿಂದ ತಂಡ ಬಂದು ಪರಿಶೀಲನೆ ನಡೆಸುತ್ತದೆ. ಪರಿ­ಹಾರವೂ ಪ್ರಕಟವಾಗುತ್ತದೆ. ಆದರೆ ಬರ ಬೇಗ ಯಾರ ಕಣ್ಣಿಗೂ ಬೀಳುವುದಿಲ್ಲ. ಏಕೆ ಈ ತಾರ­ತಮ್ಯ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.