ADVERTISEMENT

ಎರಡು ದಿನದ ಮುಷ್ಕರ ಏಕೆ?

ಹರೀಶ್ ಕುಮಾರ್ ಕುಡ್ತಡ್ಕ, ಮಂಗಳೂರು
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST

ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಈ ಬೇಡಿಕೆಗಳ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಈ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಅನಿವಾರ್ಯವೇ? ನಮ್ಮ ದೇಶದಲ್ಲಿ ಪದೇ ಪದೇ ಪ್ರತಿಭಟನೆ, ಮುಷ್ಕರ, ಬಂದ್, ಇತ್ಯಾದಿ ಸಾಮಾನ್ಯವಾಗಿ ಬಿಟ್ಟಿವೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ? ಪ್ರಯೋಜನವಂತೂ ಇಲ್ಲ. ಯಾವುದಕ್ಕೂ ಒಂದು ಮಿತಿಯಿರಬೇಕು. ಇದೇ

ಪುನಾರವರ್ತನೆಯಾಗುತ್ತಿದ್ದಲ್ಲಿ ದೇಶದ ಆರ್ಥಿಕ ಸ್ಥಿತಿ ಕುಸಿಯುವುದು ನಿಶ್ಚಿತ. ಒಂದು ದಿನದ ಮುಷ್ಕರದಿಂದ ಸಾಧಿಸಲಾಗದ್ದನ್ನು ಎರಡು ದಿನದ ಮುಷ್ಕರ ಸಾಧಿಸುತ್ತದೆ ಎನ್ನಲು ಖಚಿತ ಆಧಾರಗಳಿವೆಯೇ? ಸಂಘಟಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.