ADVERTISEMENT

ಏನಾಗಿದೆ ಸರ್ಕಾರಕ್ಕೆ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST

ನಾವು ರಾಜಕಾರಣಿಗಳಿಗೆ ಮತ ಕೊಟ್ಟು, ಆರಿಸಿ ಕಳಿಸುವುದು ಏತಕ್ಕಾಗಿ? ಯಾರಯಾರದ್ದೋ ಜಯಂತಿ, ತಿಥಿ, ಶ್ರಾದ್ಧಗಳನ್ನು ಆಚರಿಸಿಕೊಂಡು ಕಾಲ ಕಳೆಯುವುದಕ್ಕೋ?

ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ, ಟಿಪ್ಪು ಜಯಂತಿ, ಬಸವ ಜಯಂತಿ... ಹೀಗೆ ಯಾವ ಮತದಾರನಿಗೂ ಮೂರುಕಾಸಿನ ಪ್ರಯೋಜನಕ್ಕೆ ಬಾರದ ರಾಶಿ ರಾಶಿ ಜಯಂತಿಗಳನ್ನು ಆಚರಿಸುತ್ತಾ ಸರ್ಕಾರ ಕಾಲಯಾಪನೆ ಮಾಡುತ್ತಿದೆ. ಈ ಜಯಂತಿಗಳನ್ನು ಮಾಡುವುದು ಸರ್ಕಾರದ ಕೆಲಸವೇ? ಇವುಗಳೇನು ಜನೋಪಯೋಗಿ ಕೆಲಸಗಳೇ?

ಇವೆಲ್ಲವುಗಳಿಗೆ ಕಲಶವಿಟ್ಟಂತೆ ವಿಧಾನಸೌಧದ ಅರವತ್ತನೇ ವರ್ಷದ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದೆ. ಇದಕ್ಕೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ನಾಲ್ಕು ಸಾವಿರ ಜನರಿಗೆ ಊಟವಂತೆ! ಆ ನಾಲ್ಕು ಸಾವಿರ ಜನ ಯಾರ ಪೈಕಿಯವರೋ ಗೊತ್ತಿಲ್ಲ. ಇಲ್ಲಿ ಒಂದು ಊಟಕ್ಕೆ ಖರ್ಚಾಗುವ ಹಣ ಒಂದು ಪುಟ್ಟ ಸಂಸಾರದ ಒಂದು ತಿಂಗಳ ಬಜೆಟ್! ಇಷ್ಟು ಹಣದ ಊಟ ಮಾಡುವ ವ್ಯಕ್ತಿ ಬಕಾಸುರನ ವಂಶಸ್ಥನಾದ ರಾಕ್ಷಸನೇ ಇರಬೇಕು! ಅಂದರೆ ನಾಲ್ಕು ಸಾವಿರ ರಾಕ್ಷಸರು ಊಟಕ್ಕೆ ಬರುತ್ತಾರೆ! ಯಾರ ಮನೆಯ ಹಣವಿದು?

ADVERTISEMENT

ನೀವು ಯಾವುದೇ ಜಯಂತಿ ಮಾಡುವ ಅಗತ್ಯವಿಲ್ಲ. ಆಯಾ ಸಮುದಾಯದವರು ಅವುಗಳನ್ನು ಬೇಕಿದ್ದರೆ ಮಾಡಿಕೊಳ್ಳಲಿ. ಆದರೆ ರಸ್ತೆ ಹೊಂಡಗಳನ್ನು ಸರಿಪಡಿಸುವುದು, ಬೆಲೆಗಳನ್ನು ಇಳಿಸುವುದು ಇತ್ಯಾದಿ ಜನಹಿತ ಕಾರ್ಯಗಳನ್ನು ಮಾಡದಿದ್ದರೆ ಜನ ನಿಮಗೆ ಶಾಪ ಹಾಕುತ್ತಾರೆ. ಆದಕಾರಣ ಜಯಂತಿಗಳನ್ನು ಬದಿಗೊತ್ತಿ ಈ ಕೆಲಸಗಳ ಕಡೆಗೆ ಗಮನ ಹರಿಸಿ.

–ಜಿ.ವಿ.ಗಣೇಶಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.