ADVERTISEMENT

ಒಗ್ಗಟ್ಟು ಪ್ರದರ್ಶಿಸಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 19:43 IST
Last Updated 28 ಡಿಸೆಂಬರ್ 2017, 19:43 IST

‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’ ಎನ್ನುವಂತೆ ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ಮಹದಾಯಿ ನದಿನೀರಿನ ಹಂಚಿಕೆ ವಿಷಯ ಇತ್ಯರ್ಥವಾಗದೆ ದಿನೇ ದಿನೇ ಜಟಿಲವಾಗುತ್ತಿರುವುದು ವಿಪರ್ಯಾಸವೇ ಸರಿ.

ಮುಖಂಡರು ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡದೆ, ಜನ- ಜಾನುವಾರುಗಳಿಗೆ ನೀರೊದಗಿಸುವ ಪುಣ್ಯದ ಕೆಲಸ ಮಾಡಬೆಕು. ರಾಜ್ಯದ ಎಲ್ಲ ಶಾಸಕರು ಹಾಗೂ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಕೇಂದ್ರದ ಮೇಲೆ ಒತ್ತಡಹಾಕುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು.

ಸಮುದ್ರಕ್ಕೆ ಸೇರುವ ನೀರಿನ ವಿಷಯದಲ್ಲಿ ವಿನಾಕಾರಣ ತಕರಾರು ತೆಗೆಯುತ್ತಿರುವ ಗೋವಾ ರಾಜ್ಯಕ್ಕೆ ಕನ್ನಡಿಗರ ಏಕತೆಯ ಶಕ್ತಿಯನ್ನು ತೋರಿಸುವ ಕೆಲಸವನ್ನು ರಾಜಕಾರಣಿಗಳು ಮಾಡಲಿ.

ADVERTISEMENT

–ಜಿ.ಪಿ. ಬಿರಾದಾರ, ಮುಳಸಾವಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.