ADVERTISEMENT

ಒಬ್ಬ ವಿರಳ ಸಚಿವ !

​ಸಿ.ಪಿ.ಕೆ.ಮೈಸೂರು
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಈಗ ಬಹುಮಂದಿ ಶಾಸಕರು, ಸಂಸದರು ಸಚಿವರಾಗಲು (ಮಾಡಬಾರದ) ಶತಪ್ರಯತ್ನ ಮಾಡುತ್ತಾರೆ; ಮಂತ್ರಿಗಳಾದ ಕೂಡಲೆ ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ!

ತದ್ವಿರುದ್ಧ ವಿದ್ಯಮಾನವೊಂದು ನೆನಪಾಗುತ್ತದೆ. ಬಹಳ ಹಿಂದೇನೂ ಅಲ್ಲ. ಕರ್ನಾಟಕದ ಸಿದ್ದು ನ್ಯಾಮಗೌಡ ಎಂಬವರು ಕೇಂದ್ರ ಸಚಿವರಾಗಿದ್ದರು. ಅವರು ಚುನಾವಣೆಯಲ್ಲಿ ಗೆದ್ದ ಮೇಲೆ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ವೀಕ್ಷಿಸುತ್ತಿದ್ದಾಗ, ಅವರ ಹೆಸರನ್ನು ಕರೆಯಲಾಯಿತಂತೆ! ಅವರಿಗೆ ಪರಮಾಶ್ಚರ್ಯ: ತಾವು ಸಚಿವರಾಗಿರುವುದು ಪಾಪ ಅವರಿಗೆ ಗೊತ್ತೇ ಇರಲಿಲ್ಲ!

ಅಂಥವರೂ ಇರಬಹುದು, ವಿರಳಾತಿ ವಿರಳವಾಗಿ!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.